ಬೆಂಗಳೂರು: ಎರವಲು ಸೇವೆಗೆಂದು ಕಾರ್ಯನಿರ್ವಹಿಸಲು ಪಾಲಿಕೆ ಬಂದಿದ್ದ 31 ಅಧಿಕಾರಿಗಳ ಅವಧಿ ಮುಗಿದು, ಮಾತೃ ಇಲಾಖೆಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದರೂ, ಯಾವೊಬ್ಬ ಅಧಿಕಾರಿಯೂ ಹಿಂದಿರುಗದೆ ಪಾಲಿಕೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಅಧಿಸೂಚನೆಯಂತೆ ಯಾವುದೇ ಅಧಿಕಾರಿ ಬಿಬಿಎಂಪಿಗೆ ಎರವಲು ಸೇವೆಯಲ್ಲಿ ಕಾರ್ಯನಿರ್ವಹಿಸಲು ಬಂದರೆ, ಮೂರು ವರ್ಷದ ಬಳಿಕ ಮಾತೃ ಇಲಾಖೆಗೆ ಹಿಂತಿರುಗಬೇಕು. ಈ ಸಂಬಂಧ ಮಾತೃ ಇಲಾಖೆಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಹಾಗೂ ಪಾಲಿಕೆ ಆದೇಶ ಹೊರಡಿಸಿದೆ.
ಆದರೂ, ಯಾವೊಬ್ಬ ಅಧಿಕಾರಿಯೂ ಹಿಂತಿರುಗದೆ ಕಾನೂನು ಬಾಹೀರವಾಗಿ ಪಾಲಿಕೆಯಲ್ಲಿಯೇ ಕೆಲಸ ಮುಂದುವರಿಸ್ತುತಿದ್ದಾರೆ. 10 ಮಂದಿ ಕಾರ್ಯಪಾಲಕ ಅಭಿಯಂತರರು, 21 ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿ ಒಟ್ಟು 31 ಮಂದಿಯ ಅವಧಿ ಮುಗಿದು ವರ್ಷಗಳೇ ಕಳೆಯುತ್ತಿದ್ದರೂ, ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದೆ ಪಾಲಿಕೆಯಲ್ಲೇ ಕೆಲಸ ಮಾಡಿ ವೇತನ ಪಡೆಯುತ್ತಿದ್ದಾರೆ.
ಮಾತೃ ಇಲಾಖೆಗೆ ಹಿಂತಿರುಗದ ಅಧಿಕಾರಿಗಳು: ಕಾರ್ಯಪಾಲಕ ಅಭಿಯಂತರರಾದ ಶೇಷಾದ್ರಿ, ಎಂ.ಸಿ.ಲಕ್ಷ್ಮೀಶ್, ಬಿ.ಎಸ್.ಮುಕುಂದ, ಎಂ.ಕೆಂಪೇಗೌಡ, ಕೆ.ಸಿ.ಉಮೇಶ್, ಮೋಹನಗೌಡ, ಕೆ.ಎಂ.ವಾಸು, ಎಸ್.ಶಿವಕುಮಾರ್, ಎಂ.ಶಾಂತಕುಮಾರ್, ಆರ್.ಮಾಲತೇಶ್. ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಿ.ಟಿ.ಆಂಜನಪ್ಪ, ಬಿ.ಎ.ಮಹದೇವ್, ರಜನಿಕಾಂತ ಮಲ್ಲಿ, ಜಿ.ಡಿ.ಜಯರಾಮ್,
ಜೆ.ಆರ್.ಭಾಸ್ಕರ್, ಆರ್.ಕೆ.ಶಶಿಧರ್, ಎಸ್.ಪಿ.ವಿಜಯಕುಮಾರ್, ಕೆ.ಸಿ.ಅಶ್ವಥರೆಡ್ಡಿ, ಅಂದನಾಗೌಡ ಸಿ.ಹಳೇಮನಿ, ಕೆ.ಎನ್.ರಮೇಶ್, ಮಹಮ್ಮದ್ ನಾಯಿಮ್ ತುಲ್ಲಾಖಾನ್, ಆರ್.ಎಸ್.ಪರಮೇಶ್, ಶಿವಲಿಂಗೇಗೌಡ, ಮಹಮ್ಮದ್ ಒಬೇದುಲ್ಲಾ ಶರೀಫ್, ಎಸ್.ಎಂ.ರಾಮಚಂದ್ರಮೂರ್ತಿ, ಆರ್.ಜಿ.ಪ್ರೇಮಾನಂದಕುಮಾರ್, ಆರ್.ವಿ.ವಿಜಯಗೋಪಾಲ್, ಮುಬಾಷೀರ್ ಅಹಮ್ಮದ್, ಸೀಮಾಬ್ ಅತ್ಥರ್, ಟಿ.ಕೃಷ್ಣಪ್ಪ, ಎ.ಸಿ.ರಾಜು.
ಎರವಲು ಸೇವೆಗೆ ಬಂದವರಿಗೆ ಮಾತೃ ಇಲಾಖೆಗೆ ಹಿಂದಿರುಗುವಂತೆ ಕಳೆದ ವಾರವೇ ಸೂಚನೆ ನೀಡಿ ಆದೇಶ ಹೊರಡಿಸಲಾಗಿದೆ. ಮುಂದಿನ ವಾರದೊಳಗೆ ಎಲ್ಲರೂ ಹಿಂದಿರುಗಲಿದ್ದಾರೆ. ಆದೇಶ ಉಲ್ಲಂ ಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ