Advertisement

ODI: ಅಫ್ಘಾನಿಸ್ಥಾನ ವಿರುದ್ಧ ನಿಸ್ಸಂಕ ದ್ವಿಶತಕದ ದಾಖಲೆ

12:00 AM Feb 10, 2024 | Team Udayavani |

ಪಲ್ಲೆಕೆಲೆ: ಶ್ರೀಲಂಕಾದ ಆರಂಭಕಾರ ಪಥುಮ್‌ ನಿಸ್ಸಂಕ ನೂತನ ಎತ್ತರ ತಲುಪಿದ್ದಾರೆ. ಏಕದಿನದಲ್ಲಿ ದ್ವಿಶತಕ ಬಾರಿಸಿದ ಲಂಕೆಯ ಮೊದಲ ಕ್ರಿಕೆಟಗನೆಂಬ ಹಿರಿಮೆಗೆ ಭಾಜನರಾಗಿದ್ದಾರೆ. ಅಫ್ಘಾನಿಸ್ಥಾನ ವಿರುದ್ಧ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ನಿಸ್ಸಂಕ ಅಜೇಯ 210 ರನ್‌ ಬಾರಿಸಿ ಮೆರೆದರು.
ಇದು ನಿಸ್ಸಂಕ ಅವರ 50ನೇ ಪಂದ್ಯ ವೆಂಬುದು ವಿಶೇಷ. 139 ಎಸೆತಗಳನ್ನು ಎದುರಿಸಿ ನಿಂತ ಅವರು 20 ಬೌಂಡರಿ ಹಾಗೂ 8 ಸಿಕ್ಸರ್‌ ಸಿಡಿಸಿ ಡಬಲ್‌ ಸೆಂಚುರಿ ಸಂಭ್ರಮವನ್ನಾಚರಿಸಿದರು. ಇದು ಏಕದಿನದಲ್ಲಿ ದಾಖಲಾದ 12ನೇ ದ್ವಿಶತಕ.

Advertisement

ಶ್ರೀಲಂಕಾದ ಸರ್ವಾಧಿಕ ವೈಯಕ್ತಿಕ ರನ್‌ ದಾಖಲೆ ಸನತ್‌ ಜಯಸೂರ್ಯ ಹೆಸರಲ್ಲಿತ್ತು. ಭಾರತದೆದುರಿನ 2000ದ ಶಾರ್ಜಾ ಪಂದ್ಯದಲ್ಲಿ ಅವರು 189 ರನ್‌ ಬಾರಿಸಿದ್ದರು. ನಿಸ್ಸಂಕ ಈ ದಾಖಲೆಯನ್ನು ಮುರಿಯುವ ವೇಳೆ ಜಯಸೂರ್ಯ ಸ್ಟೇಡಿಯಂನಲ್ಲಿ ಹಾಜರಿದ್ದು, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.ನಿಸ್ಸಂಕ ಸಾಹಸದಿಂದ ಶ್ರೀಲಂಕಾ 3 ವಿಕೆಟಿಗೆ 381 ರನ್‌ ಪೇರಿಸಿತು. ಅಫ್ಘಾನ್ 50 ಓವರ್ ಆಡಿ 6 ವಿಕೆಟ್ ಗೆ 339ರನ್ ಗಳಿಸಿತು. ಶ್ರೀಲಂಕಾ 42 ರನ್‌ಗಳ ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next