Advertisement
ಮತದಾನಕ್ಕೆ ಇನ್ನೊಂದು ವಾರ ಇರುವಾಗಲೇ ಅಮೆರಿಕ, ಆಸ್ಟ್ರೇಲಿಯಾಗಳಲ್ಲಿರುವ ಸುಮಾರು 150ಕ್ಕೂ ಹೆಚ್ಚು ಅನಿವಾಸಿ ಪಟೇಲ್ ಉದ್ಯಮಿಗಳು ಗುಜರಾತ್‌ಗೆ ಆಗಮಿಸಿದ್ದಾರೆ. ಇವರೆಲ್ಲರೂ ಬಿಜೆಪಿ ಪರವಾಗಿ ಮತ ಚಲಾಯಿಸುವಂತೆ ತಮ್ಮ ಸಮುದಾಯವನ್ನು ಪ್ರೇರೇಪಿಸುವ ಅಭಿಯಾನ ಕೈಗೊಂಡಿದ್ದಾರೆ. ಸಾರ್ವತ್ರಿಕ ರ್ಯಾಲಿ, ಸಮುದಾಯ ಸಂಪರ್ಕ ಸಭೆಗಳ ಜತೆಗೆ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾ ಗ್ರಾಂ ಮೂಲಕ ಅಭಿಯಾನ ಜೋರಾಗಿ ಸಾಗಿದೆ. ಈ ಎನ್‌ಆರ್‌ಐಗಳ ಪ್ರಯತ್ನ, ಹಾರ್ದಿಕ್ ಪಟೇಲ್ ಪ್ರಯತ್ನಕ್ಕೆ ತೀವ್ರ ಹಿನ್ನಡೆ ತರಲಿದೆ ಎಂದು ಹೇಳಲಾಗುತ್ತಿದೆ.
ಕಲೋಲ್ ಕ್ಷೇತ್ರದಲ್ಲಿ ತಮ್ಮಿಚ್ಛೆಯಂತೆ ಪತ್ನಿಗೆ ಟಿಕೆಟ್ ನೀಡದೆ ತಮ್ಮ ಸೊಸೆಗೆ ಟಿಕೆಟ್ ನೀಡಿರುವ ಬಿಜೆಪಿ ಹೈಕಮಾಂಡ್ ವಿರುದ್ಧ ಕಲೋಲ್ ಕ್ಷೇತ್ರವಿರುವ ಪಂಚಮಹಲ್ ಕ್ಷೇತ್ರದ ಬಿಜೆಪಿ ಸಂಸದ ಪ್ರಭಾತ್ ಚೌಹಾನ್ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ರಾಷ್ಟ್ರೀಯ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಚೌಹಾನ್, ತತ್‌ಕ್ಷಣವೇ ಕಲೋಲ್ ಕ್ಷೇತ್ರಕ್ಕೆ ತಮ್ಮ ಪತ್ನಿಯನ್ನು ಅಭ್ಯರ್ಥಿಯನ್ನಾಗಿಸಬೇಕು. ಇಲ್ಲವಾದರೆ, ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಬಗ್ಗೆ ಯಾವುದೇ ಖಾತ್ರಿ ನೀಡಲಾಗದು ಎಂದಿದ್ದಾರೆ.