Advertisement

ಶಿ-ಬಾಕ್ಸ್‌ ಪೋರ್ಟಲ್‌ಗೆ ಸಚಿವೆ ಮನೇಕಾ ಚಾಲನೆ

02:30 PM Nov 08, 2017 | Team Udayavani |

ನವದೆಹಲಿ: ಉದ್ಯೋಗ ಸ್ಥಳದಲ್ಲಿ ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿದರೆ ಆನ್‌ಲೈನ್‌ ಮೂಲಕ ದೂರು ನೀಡಬಹುದಾದಂಥ ಪೋರ್ಟಲ್‌ “ಶಿ-ಬಾಕ್ಸ್‌’ (ಸೆಕ್ಷುಯಲ್‌ ಹರ್ಯಾಸ್‌ಮೆಂಟ್‌ ಎಲೆಕ್ಟ್ರಾನಿಕ್‌ ಬಾಕ್ಸ್‌)ಗೆ ಕೇಂದ್ರ ಸಚಿವೆ ಮನೇಕಾ ಗಾಂಧಿ ಚಾಲನೆ ನೀಡಿದ್ದಾರೆ. ಇದಕ್ಕೂ ಮೊದಲು, ಈ ಸೌಲಭ್ಯ ಕೇವಲ ಸರ್ಕಾರಿ ಉದ್ಯೋಗದ ಲ್ಲಿರುವ ಮಹಿಳೆಯರಿಗೆ ನೀಡಲಾಗಿತ್ತು. 

Advertisement

ಈಗ ಖಾಸಗಿ ಉದ್ಯೋಗಿಗಳಿಗೂ ವಿಸ್ತರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಘಟಕವೊಂದು ಶಿ-ಬಾಕ್ಸ್‌ ಅನ್ನು ನಿರ್ವಹಿಸಲಿದೆ. ಇದು ಆನ್‌ಲೈನ್‌ನಲ್ಲಿ ದಾಖಲಾದ ದೂರುಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಸಂಸ್ಥೆಗಳ ಆಂತರಿಕ ದೂರು ಸಮಿತಿಗೆ ವರ್ಗಾಯಿಸುತ್ತದೆ. ಜೊತೆಗೆ ಆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆಯೂ ಘಟಕ ಕಣ್ಣಿಟ್ಟಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next