Advertisement

ಗ್ರಾಮೀಣ ಬದುಕಿನ ಸೊಗಡನ್ನು ತೆರೆದಿಟ್ಟ ‘ಬೆಟ್ಟದ ಜೀವ’

03:26 PM Sep 12, 2018 | |

ಗ್ರಾಮೀಣ ಭಾಗದ ಸೊಗಡು, ಮಲೆನಾಡಿನ ಜೀವನ ಶೈಲಿ, ಸಂಬಂಧಗಳ ಬಗೆಗಿನ ಅತೀವ ಪ್ರೀತಿಯ ಚಿತ್ರಣವನ್ನು ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಗ್ರಾಮೀಣ ಜನರ ಬದುಕು, ಅಲ್ಲಿನ ಜನರ ಧೀಮಂತಿಕೆ, ನಡೆ, ನುಡಿ, ಸಾಹಸವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

Advertisement

ಘಟನೆ 1
ಎರಡು ದಿನ ಅಲೆದಲೆದು ಸೋತ ಜೀವ ಮಲಗಲು ಹಂಬಲಿಸುತ್ತಿತ್ತು. ಮಲಗಲು ಮನೆಯೇ ಬೇಕು ಎಂದೆನಿಸುತ್ತಿರಲಿಲ್ಲ. ಮರದ ಮಗ್ಗುಲು ಸಾಕು ಎಂದೆನಿಸುತ್ತಿತ್ತು. ತಡೆಯಲಾರದಷ್ಟು ಹಸಿವು, ನೀರಡಿಕೆ. ಕಾಡಿನ ನಡುವೆ ಮಲಗಲು ಭಯವಾಗಿ ಮನುಷ್ಯನಿರುವ ಗೂಡು ಸಿಕ್ಕಿದರೆ ಸಾಕು ಎಂದೆನಿಸುತ್ತಿತ್ತು. ಕತ್ತಲ ದಾರಿಯಲ್ಲಿ ಕಣ್ಣು ಮುಚ್ಚಿ ಸಾಗಿದಂತ ಅನುಭವ. ಹೀಗೆ ಲೇಖಕರು ಕಾದಂಬರಿಯ ಆರಂಭದಲ್ಲಿ ಪುತ್ತೂರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿ ಬಗ್ಗೆ ವಿಶ್ಲೇಷಿಸುತ್ತಾರೆ.

ಘಟನೆ 2
ಗೋಪಾಲಯ್ಯ ಅವರೊಂದಿಗೆ ಸ್ನಾನಕ್ಕೆ ಹೊರಟ ಕಾರಂತರು ನದಿ ತೀರದಲ್ಲಿ ಬಂಡೆ ಮೇಲೆ ಕುಳಿತು ಜಪವನ್ನು ಮುಗಿಸಿ ಕಾಲು ಚಾಚಿ ವಿಶ್ರಾಂತಿ ಪಡೆಯತೊಡಗಿದರು. ಅಷ್ಟರಲ್ಲಿ ಗೋಪಾಲಯ್ಯ, ಮೌನದಿಂದ ಮಾತಿಗೆ ಧುಮುಕಿದರು. ಯಾಕಾಗಿ ಇಲ್ಲಿ ಬಂದಿದ್ದೀರಿ? ಅವರ ಮಾತಿಗೆ ನಾನು ಮೌನವಾಗಿದ್ದೆ.

ಅವರೆಂದರು, ಆಗ ಕೇಳಲಿಲ್ಲವೇ ನಿಮಗೆ? ಈ ಪ್ರದೇಶದಲ್ಲಿ ವಾಸವಾಗಿರಲು ನಿಮಗೆ ಬೇಸರವಾಗುವುದಿಲ್ಲವೆ ಎಂದು ಮತ್ತೆ ಪ್ರಶ್ನಿಸಿದಾಗ ಬೆಟ್ಟದ ಕುಡಿಯಿಂದ ನದಿಗೆ ಬರುವ ತನಕ, ನೆಲದ ಗರ್ಭದಲ್ಲಿಯೇ ಹುದುಗಿ ಹರಿಯುತ್ತಿದ್ದ ಅವರ ವಿಚಾರ ಸರಣಿ, ಈಗ ಮೇಲೆ ಎದ್ದು ಬಂದ ಅನುಭವವಾಯಿತು. ಪ್ರಕೃತಿಯ ಸೌಂದರ್ಯದ ನಡುವೆ ಮೌನವೇ ಹೆಚ್ಚು ಶೋಭೆ ತರುವಂಥ ಪ್ರಶ್ನೆಯನ್ನು ಕೇಳಿ ಹಳ್ಳಿಗಾಡಿನ ಸೌಂದರ್ಯದ ವಿಶ್ಲೇಷಣೆಯೂ ಇಲ್ಲಿ ಮನಸ್ಸಿಗೆ ಮುದ ನೀಡುವಂತಿದೆ.

ಘಟನೆ 3
ರಾತ್ರಿಯ ನಿದ್ದೆ ಮುಗಿಸಿ ಬೆಳಗ್ಗೆ ಎಳುವಾಗ ಈ ನಾಡಿನಲ್ಲಿ ಹಲವು ವರ್ಷ ವಾಸಿಸಿದಂತ ಅನುಭವ. ಆ ಮನೆಯ ಪ್ರತಿಯೊಂದು ಕಂಬವೂ ನನಗೆ ತಿಳಿದಿದೆ, ತೋಟದ ಗಿಡ ಮರಗಳ ಪರಿಚಯವಿದೆ, ಅಂಗಳದ ಮುಂದಿನ ದಂಬೆಯಲ್ಲಿ ನಿತ್ಯವೂ ಕಾಲು ತೊಳೆದಂತೆ ಕಾಣಿಸುತ್ತಿತ್ತು. ಹಿಂದಿನ ದಿನ ಮನೆಯ ಸುತ್ತಲನ್ನು ಆವರಿಸಿದ ಯಾವ ಹಿಮದ ಪೀಡೆಯೂ ಈ ದಿನ ಇರಲಿಲ್ಲ. ಆಗ ಬರುವ ಪ್ರಕೃ ತಿಯ ಹಳ್ಳಿಯ ಜೀವನ ನಮ್ಮನ್ನು ಹೇಗೆ ಸೆಳೆಯುತ್ತದೆ ಎಂಬ ಅಂಶವೂ ಹುದುಗಿದೆ.

Advertisement

 ಶ್ರುತಿ ನೀರಾಯ 

Advertisement

Udayavani is now on Telegram. Click here to join our channel and stay updated with the latest news.

Next