Advertisement

ಜಾಲತಾಣದ ಬರವಣಿಗೆ ವಿಚಾರ:ತಂಡದಿಂದ ನಿಂದನೆ, ಬೆದರಿಕೆ

01:00 AM Mar 18, 2024 | Team Udayavani |

ಪುತ್ತೂರು: ಸಾಮಾಜಿಕ ಜಾಲತಾಣದ ಬರವಣಿಗೆ ವಿಚಾರದಲ್ಲಿ 15 ಅಧಿಕ ಜನರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರಜ್ವಲ್‌ ರೈ, ಸನತ್‌ ರೈ ಸಹಿತ 15 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ಬಿಜೆಪಿ ಸಾಮಾಜಿ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸದಸ್ಯ ತಾರಿಗುಣ್ಣ ನಿವಾಸಿ ಜಯಾನಂದ ಕೆ. (41) ದೂರು ನೀಡಿದ್ದಾರೆ.

ಕಾಂಗ್ರೆಸ್‌ ಸರಕಾರದ ಯೋಜನೆಗಳನ್ನು ಬರೆದಿರುವ ಬ್ಯಾನರ್‌ ಪ್ರದರ್ಶಿಸಿ ಕೊಂಡು ಚೆಂಡೆಗಳನ್ನು ಬಡಿಯುತ್ತಾ ಪ್ರವೇಶ ನುಗ್ಗಿ ತನಗೆ, ತಾಯಿಗೆ, ಪತ್ನಿ, ಮಕ್ಕಳಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಗೋಡೆಗೆ ಕಾಲಿನಿಂದ ಒದ್ದು ಅಸಭ್ಯವಾಗಿ ವರ್ತನೆ ತೋರಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ದೂರಿನಲ್ಲಿ ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next