Advertisement

ಏಗನ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಜೊಕೋವಿಕ್‌ ಚಾಂಪಿಯನ್‌

03:50 AM Jul 03, 2017 | Team Udayavani |

ಈಸ್ಟ್‌ಬೋರ್ನ್: ಇಲ್ಲಿ ನಡೆದ ಏಗನ್‌ ಇಂಟರ್‌ನ್ಯಾಶನಲ್‌ ಗ್ರಾಸ್‌ಕೋರ್ಟ್‌ ಟೆನಿಸ್‌ ಪಂದ್ಯಾವಳಿಯಲ್ಲಿ ನೊವಾಕ್‌ ಜೊಕೋವಿಕ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ವಿಂಬಲ್ಡನ್‌ ಪಂದ್ಯಾವಳಿಗೆ ಸಜ್ಜಾಗಿರುವ ಸರ್ಬಿಯನ್‌ ಟೆನಿಸಿಗನಿಗೆ ಸಹಜವಾಗಿಯೇ ಹೆಚ್ಚಿನ ಆತ್ಮವಿಶ್ವಾಸ ಮೂಡಿದೆ. ಫಾರ್ಮ್ ಬಗ್ಗೆಯೂ ನಂಬಿಕೆ ಬಂದಿದೆ.

Advertisement

ಶನಿವಾರ ರಾತ್ರಿ “ಡಿವೋನ್‌‌ಶೈರ್‌ ಪಾರ್ಕ್‌’ನಲ್ಲಿ ನಡೆದ ಫೈನಲ್‌ನಲ್ಲಿ ಜೊಕೋವಿಕ್‌ ಫ್ರಾನ್ಸ್‌ನ ಗೇಲ್‌ ಮಾನ್‌ಫಿಲ್ಸ್‌ ಅವರನ್ನು 6-3, 6-4 ಅಂತರದಿಂದ ನೇರ ಸೆಟ್‌ಗಳಲ್ಲಿ ಮಣಿಸಿದರು. ಜೊಕೋವಿಕ್‌ ಈ ಕೂಟದಲ್ಲಿ ಆಡುತ್ತಿರುವುದು ಇದೇ ಮೊದಲು. ಅವರು ಒಂದೂ ಸೆಟ್‌ ಕಳೆದುಕೊಳ್ಳದೆ ಗೆಲುವಿನ ಪತಾಕೆ ಹಾರಿಸಿದರು.

30ರ ಹರೆಯದ ಸರ್ಬಿಯನ್‌ ಟೆನಿಸಿಗ ಈ ವರ್ಷ ಕೈಕೊಟ್ಟ ಫಾರ್ಮ್ನಿಂದ ತೀವ್ರ ಸಮಸ್ಯೆಗೆ ಸಿಲುಕಿದ್ದರು. ಜತೆಗೆ ಗಾಯದ ಸಮಸ್ಯೆಗೂ ತುತ್ತಾಗಿದ್ದರು. ಇದು 2017ರಲ್ಲಿ ಜೊಕೋವಿಕ್‌ ಗೆದ್ದ ಕೇವಲ 2ನೇ ಟೆನಿಸ್‌ ಪ್ರಶಸ್ತಿ; ವೃತ್ತಿ ಬದುಕಿನ 68ನೇ ಪ್ರಶಸ್ತಿ. ಸೋಮವಾರದಿಂದ ಆರಂಭವಾಗಲಿರುವ ವಿಂಬಲ್ಡನ್‌ನಲ್ಲಿ 4ನೇ ಸಲ ಚಾಂಪಿಯನ್‌ ಆಗುವ ಗುರಿ ಜೊಕೋವಿಕ್‌ ಅವರದು. 2011, 2014 ಹಾಗೂ 2015ರಲ್ಲಿ ಅವರು ವಿಂಬಲ್ಡನ್‌ ಕಿರೀಟ ಏರಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next