Advertisement
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಅಧಿಕಾರಿಗಳೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸುಮಾರು ಒಟ್ಟು 3400ವಕ್ಫ್ ಸಂಸ್ಥೆಗಳ ಮಾಹಿತಿ ಲಭ್ಯವಿದ್ದು, ಇವುಗಳಡಿ ಹಲವಾರು ಸ್ವತ್ತುಗಳಿವೆ. ಅವುಗಳಲ್ಲಿ ಬಹಳಷ್ಟು ಆಸ್ತಿಗಳು ಒತ್ತುವರಿ ಆಗಿರುವುದು ತಿಳಿದು ಬಂದಿದೆ. ಅವುಗಳ ನಿಖರ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಹಾಯಕ ಆಯುಕ್ತ ಹಾಗೂ ತಹಶೀಲ್ದಾರ ಅವರನ್ನು ಒಳಗೊಂಡ ಸಭೆ ಕರೆಯಲಾಗುವುದು. ವಕ್ಫ್ ಅಧಿಕಾರಿಗಳು ವಕ್ಫ್ಆ ಸ್ತಿಗಳ ಅತಿಕ್ರಮಣ ತೆರವುಗೊಳಿಸಲು ಸರ್ಕಾರ ಈ ಹಿಂದೆ ಹೊರಡಿಸಿರುವ ಆದೇಶಗಳನ್ನು ಹಾಗೂ ವಕ್ಫ್ ಆಸ್ತಿಗಳ ವಿವರ ನೀಡುವಂತೆ ತಿಳಿಸಿದರು. ಜಿಲ್ಲೆಯ 96 ವಕ್ಫ್ ಆಸ್ತಿಗಳಲ್ಲಿ ಆಗಿರುವ ಅತಿಕ್ರಮಣವನ್ನು
ತೆರವುಗೊಳಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಈ ಪೈಕಿ 21 ಆಸ್ತಿಗಳ ಅತಿಕ್ರಮಣ ತೆರವುಗೊಳಿಸಲಾಗಿದೆ. ಉಳಿದ ಆಸ್ತಿಗಳ ಅತಿಕ್ರಮಣ ತೆರವು ಗೊಳಿಸಲು ಸಾಧ್ಯವಾಗಿಲ್ಲ. 44 ಪ್ರಕರಣಗಳು ಅತಿಕ್ರಮಣ ತೆರವಿಗೆ ಯೋಗ್ಯವಾಗಿವೆ.