Advertisement

ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ಸೂಚನೆ

11:40 PM Jun 23, 2019 | Team Udayavani |

ಬೆಂಗಳೂರು: ರಾಜ್ಯದ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಗುರುತಿಸಲಾಗಿರುವ ಬೋಧಕ ಹಾಗೂ ಬೋಧಕೇತರ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಸಂಬಂಧಪಟ್ಟ ಅನುದಾನಿತ ಕಾಲೇಜುಗಳಿಗೆ ತಿಳಿಸಿದೆ.

Advertisement

ಅನುದಾನಿತ ಕಾಲೇಜುಗಳಲ್ಲಿರುವ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅಗತ್ಯ ಕಾರ್ಯಭಾರ ಇಲ್ಲದೆ ಇದ್ದರೆ ಅಂತಹ ವಿಷಯದ ಖಾಲಿ ಹುದ್ದೆಗಳನ್ನು ಕಾರ್ಯಭಾರ ಇರುವ ಅನುದಾನಿತ ವಿಷಯಗಳಿಗೆ ಹುದ್ದೆ ಪರಿವರ್ತಿಸಿ ಭರ್ತಿ ಮಾಡಿಕೊಳ್ಳಬೇಕು. ಜತೆಗೆ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ವಿಧಾನಮಂಡಲದ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.

ಇಷ್ಟಾದರೂ ಕೆಲವು ಅನುದಾನಿತ ಕಾಲೇಜುಗಳು ಬ್ಯಾಕ್‌ಲಾಗ್‌ ಹುದ್ದೆಯನ್ನು ಭರ್ತಿಮಾಡಿಕೊಳ್ಳದೆ ಇರುವುದನ್ನು ಸಚಿವ ಸಂಪುಟ ಉಪ ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಇದಕ್ಕೆ ಸಂಬಂಧಿಸಿದವರ ಮೇಲೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ಹೀಗಾಗಿ, ಕಾರ್ಯಭಾರ ಇಲ್ಲದ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಕಾರ್ಯಭಾರವಿರುವ ಕಡೆಗೆ ಪರಿವರ್ತಿಸಿ ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಅನುದಾನಿತ ಕಾಲೇಜುಗಳ ಆಡಳಿತ ಮಂಡಳಿ ಈ ಕ್ರಮ ತೆಗೆದುಕೊಳ್ಳದಿದ್ದರೆ ಇಲಾಖೆಯಿಂದಲೇ ವಿಷಯ ಪರಿವರ್ತನೆ ಮಾಡಿ ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next