Advertisement

ಕ್ರೀಡಾಂಗಣಕ್ಕೆ ಸೌಲಭ್ಯ ಒದಗಿಸಲು ಸೂಚನೆ

07:03 AM Jul 02, 2020 | Lakshmi GovindaRaj |

ಹೊಸಕೋಟೆ: ನಗರದ ಚನ್ನಬೈರೇಗೌಡ ಕ್ರೀಡಾಂಗಣಕ್ಕೆ ಅಗತ್ಯ ಸೌಲಭ್ಯ ಒದಗಿಸ ಬೇಕು ಎಂದು ಶಾಸಕ ಶರತ್‌ ಬಚ್ಚೇಗೌಡ ಅಧಿಕಾರಿಗಳಿಗೆ ಸೂಚಿಸಿದರು. ಕ್ರೀಡಾಂಗಣದ ಸಮಸ್ಯೆ ಪರಿಶೀಲಿಸಿ ಮಾತನಾಡಿ, ಜಿಲ್ಲಾಮಟ್ಟದ ಕ್ರೀಡಾಂಗಣದಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದು, ಶೀಘ್ರ ಕ್ರಮಕೈಗೊಳ್ಳಬೇಕು.

Advertisement

ಅದಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಲಭ್ಯವಿರುವ ಹಣದೊಂದಿಗೆ ನಗರಸಭೆ ಹಾಗೂ ಗ್ರಾಪಂ ಕ್ರೀಡೆ ಬಗ್ಗೆ ತೆರಿಗೆ  ಸಂಗ್ರಹಿಸುವ ಅನುದಾನ ನೀಡಬೇಕು. ಕ್ರೀಡಾಂಗಣದ ಸಾರ್ವಜನಿಕರ ವೀಕ್ಷಣೆ ಪ್ರದೇಶದ ಮೇಲ್ಛಾವಣಿ ಸರಿಪಡಿಸಲು, ಟ್ರ್ಯಾಕ್‌ ನಿರ್ಮಿಸಿ ಸಮರ್ಪಕವಾಗಿ ನಿರ್ವಹಿಸ  ಬೇಕು. ಕ್ರೀಡಾಂಗಣದಲ್ಲಿ ಮಳೆ ನೀರು ನಿಲ್ಲದಂತೆ ಗಮನಹರಿಸಬೇಕು  ಹಾಗೂ ಸ್ವತ್ಛತೆಗೆ ಆದ್ಯತೆ ನೀಡಬೇಕು.

ರಾತ್ರಿ ಕಾವಲುಗಾರರ ನೇಮಿಸಿ, ಅಕ್ರಮ ಪ್ರವೇಶ ನಿರ್ಬಂಧಿಸಬೇಕು. ಕ್ರೀಡಾಂಗಣದ ಸುತ್ತ ಹಾಕಿರುವ ಬೇಲಿ ಭದ್ರಪಡಿಸಬೇಕು. ಕ್ರೀಡಾಂಗಣದ ವ್ಯಾಯಮ ಶಾಲೆ ಮೇಲ್ಭಾಗದಲ್ಲಿ  13 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ವಿಶಾಲ ಹಾಲ್‌ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಧಿಕಾರಿಗಳು ಕ್ರೀಡಾಪಟುಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಿಯಾಯೋಜನೆ ಸಿದ್ಧಪಡಿಸಿ ನೀಡಿದರೆ ಖಾಸಗಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ,  ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಭಿವೃದ್ಧಿ ಕೈಗೊಳ್ಳಲಾಗುವು ದು ಎಂದರು.

ಗ್ರಾಮಾಂತರ ಜಿಲ್ಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ಜಿಪಂ ಎಇಇ ಸೈಯದ್‌ ಜಾವಿದ್‌, ನಾರಾಯಣ ರೆಡ್ಡಿ, ನಗರಸಭೆ ಪೌರಾಯುಕ್ತ ಪರಮೇಶ್‌, ಬಿಇಒ ಎಸ್‌.ಎನ್‌.ಕನ್ನಯ್ಯ, ತಾಪಂ ಸಹಾಯಕ ನಿರ್ದೇಶಕ ಡಿ.ಎಂ. ಅಮರನಾರಾಯಣ ಸ್ವಾಮಿ, ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯ ಎಚ್‌.ಸಿ ಷಣ್ಮುಗಂ, ಹಿರಿಯ ಕ್ರೀಡಾಪಟು ಕೆ. ಮಂಜುನಾಥ್‌, ರಾಕೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next