Advertisement
ಜಿ.ಪಂ. ಕಚೇರಿಯ ಸಭಾಂಗಣದಲ್ಲಿ ಬುಧವಾರ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಿ ಯೋಜನೆಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ 180 ಮಂದಿಗೆ ಸಾಲ ನೀಡುವ ಗುರಿ ಇದ್ದು, 472 ಮಂದಿಗೆ ಸಾಲ ವಿತರಿಸುವ ಮೂಲಕ ಶೇ. 262 ಸಾಧನೆ ಮಾಡಿ ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ. ವಿವಿಧ ಯೋಜನೆಗಳಲ್ಲಿ ಸಾಲಕ್ಕಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ತಿರಸ್ಕರಿಸದೆ, ತಾಂತ್ರಿಕ ಕಾರಣಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಂಡು ಅರ್ಹರಿಗೆ ಸಾಲವನ್ನು ವಿತರಿಸುವಂತೆ ತಿಳಿಸಿದರು.
ತ್ತೈಮಾಸಿಕ ವರದಿ ನೀಡಿದ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಡಿಜಿಎಂ ಲೀನಾ ಪಿಂಟೋ, ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ ಹೋಲಿಸಿದಲ್ಲಿ ಸಾಲ ನೀಡುವ ಪ್ರಮಾಣ ಶೇ. 9.58 ಹೆಚ್ಚಳವಾಗಿದ್ದು, 15,964 ಕೋ.ರೂ. ಸಾಲ ವಿತರಣೆ ಹಾಗೂ 34,120 ಕೋ.ರೂ. ಠೇವಣಿ ಸಂಗ್ರಹಿಸಲಾಗಿದೆ. ದುರ್ಬಲ ವರ್ಗಕ್ಕೆ ಸಾಲ ವಿತರಿಸಲು ವಿಶೇಷ ಒತ್ತು ನೀಡಿ, 1,30,277 ಫಲಾನುಭವಿಗಳಿಗೆ 1,855 ಕೋ.ರೂ. ವಿತರಿಸಲಾಗಿದೆ. ಎಲ್ಲ ಬ್ಯಾಂಕ್‌ಗಳು ಮಾರ್ಚ್ ಅಂತ್ಯಕ್ಕೆ ನಿಗದಿತ ಗುರಿಯನ್ನು ಸಾಧಿಸುವಂತೆ ತಿಳಿಸಿದರು. ಆರ್‌ಬಿಐ ಕಾರ್ಯನಿರ್ವಾಹಕ ಅಧಿಕಾರಿ ಅಲೋಕ್ ಸಿನ್ಹಾ ಮಾತನಾಡಿ, ಆನ್‌ಲೈನ್ ಬ್ಯಾಂಕಿಂಗ್ ಮತ್ತು ಬ್ಯಾಂಕ್ ಹೆಸರಿನಲ್ಲಿ ಆಗುತ್ತಿರುವ ಮೋಸದ ಬಗ್ಗೆ ಗ್ರಾಹಕರ ಜಾಗೃತಿ ಕಾರ್ಯ ನಿರಂತರ ಆಗುತ್ತಿದೆ. ಚುನಾವಣೆ ಪ್ರಯುಕ್ತ ಬ್ಯಾಂಕ್ ವಹಿವಾಟುಗಳ ನಿರ್ವಹಣೆ ಕುರಿತಂತೆ ಕೇಂದ್ರ ಚುನಾವಣ ಆಯೋಗ ಸೂಚಿಸಿರುವ ಮಾರ್ಗಸೂಚಿಯನ್ನು ಪಾಲಿಸುವಂತೆ ಹಾಗೂ ಆಯೋಗ ಕೋರುವ ಅಗತ್ಯ ಮಾಹಿತಿಗಳನ್ನು ನೀಡುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದರು.
Related Articles
ಜಿಲ್ಲೆಯ ವಿವಿಧ ಬ್ಯಾಂಕ್, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement
13,878 ಕೋ.ರೂ. ಸಾಲ ಗುರಿಉಡುಪಿ, ಮಾ. 29: ಜಿಲ್ಲೆಯಲ್ಲಿ ಕೇಂದ್ರ – ರಾಜ್ಯ ಸರಕಾರಗಳ ವಿವಿಧ ಯೋಜನೆ ಸೇರಿದಂತೆ ಆದ್ಯತೆ, ಆದ್ಯತೇತರ ವಲಯಕ್ಕೆ 2023-24ನೇ ಸಾಲಿನಲ್ಲಿ ವಿವಿಧ ಬ್ಯಾಂಕ್‌ಗಳ ಮೂಲಕ 13,878 ಕೋ.ರೂ. ಸಾಲ ವಿತರಣೆಯ ಗುರಿಯನ್ನು ಹೊಂದಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನೆ ಸಭೆಯಲ್ಲಿ 2023-24ನೇ ಸಾಲಿನ ಕ್ರೆಡಿಟ್ ಪ್ಲಾನ್ ಪುಸ್ತಕವನ್ನು ಜಿ.ಪಂ. ಸಿಇಒ ಪ್ರಸನ್ನ ಎಚ್. ಬಿಡುಗಡೆ ಮಾಡಿದರು. ಎ. 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗುವುದರಿಂದ ರಾಜ್ಯ – ಕೇಂದ್ರ ಸರಕಾರಿ ಯೋಜನೆಗಳನ್ನು ಫಲಾನು ಭವಿಗಳಿಗೆ ನಿರ್ದಿಷ್ಟ ಸಮಯ ದಲ್ಲಿ ತಲುಪಿಸಬೇಕು. ಯಾವುದೇ ಅರ್ಜಿಯನ್ನು ಸಕಾರಣವಿಲ್ಲದೆ ತಿರಸ್ಕರಿಸುವುದು ಅಥವಾ ಬ್ಯಾಂಕ್‌ನಲ್ಲೇ ಇರಿಸಿಕೊಳ್ಳುವುದನ್ನು ಮಾಡಬಾರದು ಎಂದು ಸೂಚನೆ ನೀಡಿದರು. ವಲಯವಾರು ಸಾಲ ವಿವರ
ಕೃಷಿ ಸಾಲಕ್ಕೆ 2,446.39 ಕೋ.ರೂ., ಕೃಷಿ ಮೂಲ ಸೌಕರ್ಯಕ್ಕೆ 330.39 ಕೋ.ರೂ., ಕೃಷಿ ಸಂಬಂಧಿತ ಚಟುವಟಿಕೆಗೆ 2,725.79 ಕೋ.ರೂ. ಸೇರಿ ಒಟ್ಟು ಕೃಷಿ ಕ್ಷೇತ್ರದಲ್ಲಿ ಸಾಲಕ್ಕಾಗಿ 5,502 ಕೋ.ರೂ. ಮೀಸಲಿ ಡಲಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕ ವಲಯಕ್ಕೆ 3,444.72 ಕೋ.ರೂ., ಶಿಕ್ಷಣ ಕ್ಷೇತ್ರಕ್ಕೆ 190.06 ಕೋ.ರೂ., ವಸತಿ ಕ್ಷೇತ್ರಕ್ಕೆ 1,063 ಕೋ.ರೂ., ರಫ್ತು ವಿಭಾಗಕ್ಕೆ 324.28 ಕೋ.ರೂ., ಸಾಮಾಜಿಕ ಮೂಲ ಸೌಕರ್ಯಕ್ಕೆ 58.19 ಕೋ.ರೂ., ನವೀಕರಿಸ ಬಹುದಾದ ಇಂಧನ ವಲಯಕ್ಕೆ 49.87 ಕೋ.ರೂ. ಸೇರಿದಂತೆ ಆದ್ಯತ ವಲಯಕ್ಕೆ ಒಟ್ಟು 10,644.72 ಕೋ.ರೂ. ಮೀಸಲಿಡಲಾಗಿದೆ. ಬಡವರಿಗೆ ಆದ್ಯತ ವಲಯದಲ್ಲಿ ಸಾಲ ಸೌಲಭ್ಯಕ್ಕೆ 809.60 ಕೋ.ರೂ. ಹಾಗೂ ಆದ್ಯತೇತರ ವಲಯಕ್ಕೆ 3,233.53 ಕೋ.ರೂ. ಮೀಸಲಿಡಲಾಗಿದೆ.
ವಿವಿಧ ವಲಯಗಳ ಒಟ್ಟು 4,05,308 ಖಾತೆಗಳಿಗೆ ಸಾಲ ಸೌಲಭ್ಯ ನೀಡುವ ಅಂದಾಜು ಮಾಡಲಾಗಿದೆ.