Advertisement

ಅರ್ಥಪೂರ್ಣ ಜಯಂತ್ಯುತ್ಸವ ಆಚರಿಸಲು ಸೂಚನೆ

01:12 PM Apr 28, 2022 | Team Udayavani |

ಕೊಪ್ಪಳ: ಮೇ ತಿಂಗಳಲ್ಲಿ ಆಚರಿಸಲಾಗುವ ಮಹನೀಯರ ಜಯಂತಿಗಳನ್ನು ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಎಸಿ ಬಸವಣಪ್ಪ ಕಲಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಡಳಿತ ಭವನದ ಸಹಾಯಕ ಆಯುಕ್ತರ ಕಾರ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಬಸವ ಜಯಂತಿ, ಶ್ರೀ ಶಂಕರಾಚಾರ್ಯರ ಜಯಂತಿ, ಭಗೀರಥ ಜಯಂತಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೇ 3ರಂದು ನಡೆಯುವ ಬಸವ ಜಯಂತಿಯಂದು ಬೆಳಗ್ಗೆ 9ಕ್ಕೆ ನಗರದ ಮಹೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಮೇ 6ರಂದು ಶ್ರೀ ಶಂಕರಾಚಾರ್ಯರ ಜಯಂತಿಯಂದು ಶಂಕರ ಭವನದಲ್ಲಿ ಬೆಳಿಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಂಜೆ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆಯು ಹಳೇ ಕೋಟೆ ಪ್ರದೇಶದ ಶಂಕರ ಭವನದಿಂದ ಆರಂಭವಾಗಿ ಗಡಿಯಾರ ಕಂಬ ಹಾಗೂ ರವೀಂದ್ರ ಮೆಡಿಕಲ್ಸ್‌ ಮಾರ್ಗವಾಗಿ ಮರಳಿ ಶಂಕರ ಭವನಕ್ಕೆ ತೆರಳಲಿದೆ ಎಂದರು.

ಮೇ 8ರಂದು ನಡೆಯುವ ಶ್ರೀ ಭಗೀರಥ ಜಯಂತಿಯಂದು ನಗರದ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮೇ 10ರಂದು ನಗರದ ಕಿನ್ನಾಳ ರಸ್ತೆಯಲ್ಲಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಗುವುದು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಹನೀಯರ ಜಯಂತಿ ಆಚರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಈ ಎಲ್ಲ ಮಹನೀಯರ ಜಯಂತಿ ಆಚರಣೆ ದಿನದಂದು ವೇದಿಕೆ ಕಾರ್ಯಕ್ರಮದಲ್ಲಿ ಸಮುದಾಯದವರ ಸಹಕಾರದಲ್ಲಿ ಶಿಷ್ಟಾಚಾರದಂತೆ ಕಾರ್ಯಕ್ರಮ ನಿರ್ವಹಿಸಬೇಕು. ಮುಖಂಡರು ಸೂಚಿಸಿದ ಉಪನ್ಯಾಸಕರನ್ನು ಕರೆಸಿ ಮಹನೀಯರ ಬಗ್ಗೆ ಉಪನ್ಯಾಸ ಏರ್ಪಡಿಸಬೇಕು. ಮೆರವಣಿಗೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದರು.

Advertisement

ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಅಬಕಾರಿ ಆಯುಕ್ತ ಸಲೀನಾ,ಕೊಟ್ರೇಶ ಮರಬನಳ್ಳಿ, ಡಾ| ಬಸವರಾಜ ಕುಂಬಾರ, ಬಸವರಾಜ ಬಳ್ಳೊಳ್ಳಿ, ಪ್ರಭು ಹೆಬ್ಟಾಳ, ರಾಜೇಶ ಸಸಿಮಠ, ಕೃಷ್ಣ ಪಡುಲೈ, ವೆಂಕಟೇಶ ಜೋಶಿ, ಯಲ್ಲಪ್ಪ ಗದ್ದಿ, ವೆಂಕಟೇಶ ಬ್ಯಾಡಗಿ, ಮೆಹಬೂಬ್‌ ಖಾನ್‌, ದೇವಪ್ಪ ಅರಕೇರಿ, ಹನುಮರೆಡ್ಡಿ ಹಂಗನಕಟ್ಟಿ, ಕಾಶೀನಾಥ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next