ವಾಷಿಂಗ್ಟನ್: ಅಮೆರಿಕದಲ್ಲಿರುವ ಭಾರತದ ರಾಯಭಾರಿ ಕಚೇರಿಯಿಂದ ಪುತ್ತಿಗೆ ಮಠದ ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ನ.9 ರಂದು ರಾಜ್ಯಗಳ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಕರ್ನಾಟಕ, ಪಂಜಾಬ್, ಛತ್ತೀಸ್ ಗಢ, ಕೇರಳ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳ ಅನಿವಾಸಿಗಳು ಭಾಗವಹಿಸಿದರು.
ಕಾನ್ಸುಲ್ ಜನರಲ್ ಮಂಜುನಾಥ್ ಚನ್ನೀರಪ್ಪ ಹಾಗೂ ಮಠದ ಪ್ರಧಾನ ಅರ್ಚಕ ರಘುಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ರಘುಪತಿ ಭಟ್ ಅವರ ವೇದಘೋಷಗಳ ಮೂಲಕ ಕಾನ್ಸುಲ್ ಜನರಲ್ ಅವರಿಗೆ ಗೌರವಾರ್ಪಣೆ ಸಲ್ಲಿಸಿ, ಸ್ವಾಗತಿಸಿದರು.
ಕಾನ್ಸುಲ್ ಜನರಲ್ ಅವರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.
ಉ.ಪ. ಕಾನ್ಸುಲ್ ಜನರಲ್ ಪ್ರಶಾಂತ್, ಭಾರತದ ಅನೇಕ ರಾಜ್ಯಗಳ ಸಾಧನೆಯ ವಿಚಾರಗಳನ್ನು ಪ್ರಸ್ತುತಪಡಿಸಿದರು. ಆನಿವಾಸಿ ಭಾರತೀಯರನ್ನು ಸಭೆಗೆ ವಿಶೇಷ ಪರಿಚಯ ಮಾಡಿಸಿದರು.
ಕಲಾವಿದರು ಅವರವರ ರಾಜ್ಯದ ವಿಭಿನ್ನ ಸಂಸ್ಕೃತಿ, ಪರಂಪರೆ, ಕಲೆ ಮತ್ತು ಅಭಿರುಚಿಗಳನ್ನು ಕಾರ್ಯಕ್ರಮಗಳಲ್ಲಿ ಅಭಿವ್ಯಕ್ತಪಡಿಸಿದರು.
ನಂದ ತಿವಾರಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಅಚಲೇಶ್ ಜಿ. ಮತ್ತು ಯಶ್ ಹವಳಿಮನೆ ದೇವರು ಉಪಸ್ಥಿತರಿದ್ದರು.