ಅನುಗುಣವಾಗಿ ಶಿಕ್ಷಕರು ಪಾಠ ಮಾಡುವುದು ಹೆಚ್ಚು ಸಮಂಜಸ ಎನಿಸುತ್ತದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಪ್ರಾಧ್ಯಾಪಕರಿಗೆ ಸಲಹೆ ನೀಡಿದರು.
Advertisement
ನಗರದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಶರಣಬಸವ ವಿವಿಯು ಗುರುವಾರ ಹಮ್ಮಿಕೊಂಡಿದ್ದ ಸಿಬ್ಬಂದಿ ಪುಷ್ಟಿಕರಣ(ಫ್ಯಾಕಲ್ಟಿ ಎನ್‌ರಿಚ್) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರ ಕೈಯಲ್ಲಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮುಖಾಂತರ ಪಾಠ ಬೋಧಿಸಬೇಕು. ಶಿಕ್ಷಿಸುವುದರಿಂದ
ಮಕ್ಕಳಲ್ಲಿ ಕಲಿಕೆ ಆಸಕ್ತಿ ಕಡಿಮೆಯಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶರಣಬಸವ ವಿವಿ ಕುಲಪತಿ ಡಾ| ನಿರಂಜನ್ ನಿಷ್ಠಿ ಮಾತನಾಡಿ, ಶಿಕ್ಷಕ ಹುದ್ದೆ ಗೌರಯುತವಾದದ್ದು. ಮಕ್ಕಳ ಭವಿಷ್ಯ ಬದಲಾಯಿಸುವ ಜವಾಬ್ದಾರಿ ಶಿಕ್ಷಕರ ಕೈಯಲ್ಲಿದೆ. ಶ್ರದ್ಧೆಯಿಂದ ಕಾಯಕ ಮಾಡುವ ಮೂಲಕ ಪೂಜ್ಯ ಡಾ| ಶರಣಬಸವಪ್ಪ ಅಪ್ಪಾಜಿ ಅವರ ಕನಸನ್ನು ಸಾಕಾರಗೊಳಿಸಬೇಕು. ಈ ವಿಶ್ವವಿದ್ಯಾಲಯವನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸುವುದು ತಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
Related Articles
ಶಿಕ್ಷಕರ ಕಲಿಕೆ ಪುಷ್ಠಿಕರಣದ ಬಗ್ಗೆ ವಿವರಿಸಿದರು. ವಿದ್ಯಾರ್ಥಿನಿ ಶಿವರಂಜಿನಿ ಪ್ರಾರ್ಥಿಸಿದರು. ಪ್ರೊ| ಅಮೃತಾ ಪತ್ತಾರ
ನಿರೂಪಿಸಿದರು, ಡಾ| ಬಸವರಾಜ ಮಠಪತಿ ಸ್ವಾಗತಿಸಿದರು.
Advertisement
ಕುಲಸಚಿವ (ಮೌಲಮಾಪನ) ಡಾ| ಶಿವದತ್ತ ಹೊನ್ನಳ್ಳಿ, ಡಾ| ಲಕ್ಷ್ಮೀ ಪಾಟೀಲ, ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್, ಪ್ರೊ| ವಾಣಿಶ್ರೀ, ಪ್ರೊ| ಶಿಲ್ಪ ಬಿ.ಎಂ., ಪ್ರೊ| ಗೀತಾ ಹರವಾಳ, ಡಾ| ಶಿವಕುಮಾರ ರಾಚೋಟಿ,ಡಾ| ಶಿವಕುಮಾರ ಜವಳಗಿ, ಡಾ| ನಿರ್ದೋಷ ಪಾಟೀಲ, ಡಾ| ಕಿರಣ ಮಾಕಾ, ಡಾ| ರಾಜಶೇಖರ ಯರಗೋಳ
ಹಾಗೂ ವಿವಿಧ ವಿಭಾಗಗಳ ಡೀನ್‌ಗಳು, ಮುಖ್ಯಸ್ಥರು, ಪ್ರಾಧ್ಯಾಪಕರು ಹಾಜರಿದ್ದರು.