Advertisement

Ayodhya: ಮಂದಿರ ಮಾತ್ರವಲ್ಲ, ಇಡೀ ಅಯೋಧ್ಯೆಗೆ ಹೊಸ ಸ್ಪರ್ಶ

09:08 PM Nov 18, 2023 | Pranav MS |

ಉತ್ತರಪ್ರದೇಶದಲ್ಲಿ ಶ್ರೀರಾಮನ ಭವ್ಯ ಮಂದಿರ ಲೋಕಾರ್ಪಣೆಗೊಳ್ಳಲಿರುವಂತೆಯೇ, ಪ್ರಾಚೀನ ಅಯೋಧ್ಯಾ ನಗರಿ ಅತಿದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ. ವಿಮಾನ ನಿಲ್ದಾಣದಿಂದ ಹಿಡಿದು ಅಯೋಧ್ಯಾ ಜಂಕ್ಷನ್‌, ಪಥಗಳು, ಪ್ರಾಚೀನ ಕೆರೆಗಳಿಗೆ ಹೊಸ ಸ್ಪರ್ಶ ಸಿಗಲಿದೆ. ಸುಮಾರು 200ರಷ್ಟು ಯೋಜನೆಗಳು 2024ರೊಳಗೆ ಸಾಕಾರಗೊಳ್ಳಲಿವೆ.

Advertisement

ಒಟ್ಟು ಎಷ್ಟು ಯೋಜನೆಗಳು?- 200
ಒಟ್ಟಾರೆ ವೆಚ್ಚ- 30,923 ಕೋಟಿ ರೂ.

ಏರ್‌ಪೋರ್ಟ್‌
ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದಕ್ಕಾಗಿ 821 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ರನ್‌ವೇ ನಿರ್ಮಾಣ, ರಾತ್ರಿ ಹೊತ್ತು ಲ್ಯಾಂಡಿಂಗ್‌ ಮತ್ತು ಪ್ರತಿಕೂಲ ಹವಾಮಾನದಲ್ಲಿ ವಿಮಾನ ಇಳಿಯಲು ಬೇಕಾದ ವ್ಯವಸ್ಥೆ, ಎಟಿಸಿ ಟವರ್‌ ನಿರ್ಮಾಣ ಪೂರ್ಣಗೊಂಡಿದೆ.

ಅಯೋಧ್ಯಾ ಜಂಕ್ಷನ್‌
620 ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯಾ ಜಂಕ್ಷನ್‌ಗೆ ಹೊಸ ಜೀವಕಳೆ ನೀಡುವ ಕಾರ್ಯ ಭರದಿಂದ ಸಾಗಿದೆ. ಜಂಕ್ಷನ್‌ನ ವಿಸ್ತರಣೆ, ಪ್ರಯಾಣಿಕರು-ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳು, ರಾಮಮಂದಿರದ ಮಾದರಿಯಲ್ಲೇ ಪ್ಯಾಸೆಂಜರ್‌ ಟರ್ಮಿನಲ್‌ ಕಟ್ಟಡ, 3 ಅಂತಸ್ತಿನ ಸ್ಟೇಷನ್‌ ಬಿಲ್ಡಿಂಗ್‌, 6 ಮೀ. ಅಗಲದ ಎರಡು ಪಾದಚಾರಿ ಮೇಲ್ಸೇತುವೆಗಳು, ವಸತಿ ಸಂಕೀರ್ಣಗಳು ನಿರ್ಮಾಣಗೊಳ್ಳಲಿವೆ.

ಪಥಗಳು ಮತ್ತು ಕಾರಿಡಾರ್‌ಗಳು
ರಾಮಮಂದಿರದ ಮಾರ್ಗದಲ್ಲಿ ತೊಂದರೆ ಉಂಟುಮಾಡಬಾರದು ಎಂಬ ಉದ್ದೇಶದಿಂದ 797 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಅಗಲೀಕರಣ ಕಾಮಗಾರಿ ಆರಂಭಿಸಲಾಗಿದೆ. 2 ಕಿ.ಮೀ. ಉದ್ದದ ರಾಮಜನ್ಮಭೂಮಿ ಪಥ, 850 ಮೀಟರ್‌ನ ಭಕ್ತಿ ಪಥ, 13 ಕಿ.ಮೀ. ಉದ್ದದ ರಾಮ ಪಥ ನಿರ್ಮಾಣ ಕಾರ್ಯದಲ್ಲಿ ಸಾವಿರಕ್ಕೂ ಅಧಿಕ ಕಾರ್ಮಿಕರು ನಿರತರಾಗಿದ್ದಾರೆ.

Advertisement

ಕೆರೆಗಳು, ಧಾರ್ಮಿಕ ಕೇಂದ್ರಗಳಿಗೆ ನವಸ್ಪರ್ಶ
ಅಯೋಧ್ಯೆಯಲ್ಲಿರುವ ಹಳೆಯ ಆಶ್ರಮಗಳು, ಪ್ರಾಚೀನ ಕೆರೆಗಳು ಮತ್ತು ದೇವಾಲಯಗಳನ್ನು ಅಂದಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ 37 ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದೆ. 68.80 ಕೋಟಿ ರೂ. ವೆಚ್ಚದಲ್ಲಿ ಅವುಗಳ ಪುನಶ್ಚೇತನ ನಡೆಯಲಿದೆ.

ನಿಖರ ಮಾಹಿತಿ ಒದಗಿಸಲು ಯುವಕರಿಗೆ ಆಮಂತ್ರಣ
ಮಂದಿರ ನಿರ್ಮಾಣದಲ್ಲಿನ ಪ್ರಗತಿ, ಪ್ರಾಣ ಪ್ರತಿಷ್ಠೆಯ ವಿಧಿ ವಿಧಾನಗಳು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ಜನರಿಗೆ ತಲುಪಿಸಲು ಶ್ರೀ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ಈಗ ಜಾಲತಾಣದ ಮೊರೆ ಹೋಗಿದೆ. ಸಂಘಪರಿವಾರದ ವತಿಯಿಂದ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಯುವಕರಿಗೆ ಕ್ಯಾಮೆರಾ ಹಾಗೂ ಮೊಬೈಲ್‌ ಫೋನ್‌ನೊಂದಿಗೆ ರಾಮಮಂದಿರದ ಆವರಣದೊಳಕ್ಕೆ ಇವರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ದೇಶವಾಸಿಗಳಿಗೆ ಮಂದಿರ ನಿರ್ಮಾಣ, ಉದ್ಘಾಟನೆಗೆ ಸಂಬಂಧಿಸಿದ ನಿಖರ ಮಾಹಿತಿ ಮತ್ತು ಫೋಟೋಗಳು ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಟ್ರಸ್ಟ್‌ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next