Advertisement

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

07:56 PM Nov 08, 2024 | Team Udayavani |

ಹೊಸದಿಲ್ಲಿ: ಮಹಿಳೆಯರ ಬಟ್ಟೆಗಳ ಹೊಲಿಯಲು ಪುರುಷ ಟೈಲರ್ ಅಳತೆ ತೆಗೆಯಬಾರದು ಹಾಗೂ ಬ್ಯೂಟಿ ಪಾರ್ಲರ್‌ಗಳಲ್ಲಿ  ಪುರುಷರು ಅವರ ಕೂದಲನ್ನು ಕತ್ತರಿಸಬಾರದೆಂಬ ಪ್ರಸ್ತಾವನೆಯನ್ನು ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಬಬಿತಾ ಚೌಹಾಣ್ ಮಂಡಿಸಿದ್ದು ಇದಕ್ಕೆ ಇತರ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಮಹಿಳೆಯರ ‘ಕೆಟ್ಟ ಸ್ಪರ್ಶ’ದಿಂದ ರಕ್ಷಿಸಲು ಮತ್ತು ಪುರುಷರ ಕೆಟ್ಟ ಉದ್ದೇಶಗಳ ತಡೆಯುವುದಾಗಿದೆ.

Advertisement

ಈ ಕುರಿತು ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಬಬಿತಾ ಚೌಹಾಣ್ ಮಾತನಾಡಿ ಪುರುಷರಿಗೆ ಮಹಿಳೆಯರ ಅಳತೆ ತೆಗೆದುಕೊಳ್ಳಲು ಅವಕಾಶ ನೀಡಬಾರದು ಮತ್ತು ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸುವುದು ಸೇರಿದಂತೆ ಹಲವು ಸಲಹೆಗಳ ನೀಡಲಾಗಿದೆ. ಮಹಿಳೆಯರು ಹೋಗುವ ಜಿಮ್‌ಗಳಲ್ಲಿ ಮಹಿಳಾ ತರಬೇತುದಾರರು ಇರಬೇಕು. ಎಲ್ಲಾ ಜಿಮ್ ತರಬೇತುದಾರರ ಪೊಲೀಸ್ ಪರಿಶೀಲನೆ ನಡೆಸಬೇಕು. ಒಬ್ಬ ಮಹಿಳೆ ಪುರುಷ ತರಬೇತುದಾರರಿಂದ ತರಬೇತಿ ಪಡೆಯಲು ಬಯಸಿದರೆ, ಅವಳು ಅದನ್ನು ಲಿಖಿತವಾಗಿ ನೀಡಬೇಕು.

ಏಕೆಂದರೆ, ಜಿಮ್‌ಗೆ ಹೋಗುವ ಮಹಿಳೆಯರು ಮತ್ತು ಬಾಲಕಿಯರ ಶೋಷಣೆಯ ದೂರುಗಳು ಮಹಿಳಾ ಆಯೋಗಕ್ಕೆ ನಿರಂತರವಾಗಿ ಬರುತ್ತಿದ್ದು, ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಹೆಣ್ಣು ಮಕ್ಕಳು ಪ್ರಯಾಣಿಸುವ ಶಾಲಾ ಬಸ್‌ಗಳಲ್ಲಿ ಮಹಿಳಾ ಉದ್ಯೋಗಿಗಳಿರಬೇಕು. ಸದ್ಯ ಮಹಿಳಾ ಆಯೋಗ ಎಲ್ಲ ಜಿಲ್ಲೆಗಳಿಗೂ ಈ ಸಂಬಂಧ ಆದೇಶ ನೀಡಿದೆ. ಒಪ್ಪದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಎಲ್ಲ ಪುರುಷರಿಗೂ ಕೆಟ್ಟ ಉದ್ದೇಶವಿರಲ್ಲ:
ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ಹಿಮಾನಿ ಅಗರ್ವಾಲ್ ಮಾತನಾಡಿ, ಇತ್ತೀಚೆಗೆ ನಡೆದ ಮಹಿಳಾ ಆಯೋಗದ ಸಭೆಯಲ್ಲಿ, ಮಹಿಳೆಯರು ಧರಿಸುವ ಬಟ್ಟೆಗಳನ್ನು ಮಹಿಳಾ ಟೈಲರ್‌ಗಳು ಮಾತ್ರ ಅಳತೆ ತೆಗೆದುಕೊಳ್ಳಬೇಕು ಎಂಬ ಪ್ರಸ್ತಾಪ ಮಾಡಲಾಗಿದೆ. ಅಲ್ಲದೇ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಬೇಕು. ಮಹಿಳಾ ಕ್ಷೌರಿಕರು ಮಾತ್ರ ಸಲೂನ್‌ನಲ್ಲಿ ಮಹಿಳಾ ಗ್ರಾಹಕರನ್ನು ನೋಡಿಕೊಳ್ಳಬೇಕು ಎಂದು ನಾವು ಹೇಳಿದ್ದೇವೆ. ಏಕೆಂದರೆ, ಈ ರೀತಿಯ ವೃತ್ತಿಯಲ್ಲಿ ಪುರುಷರು ತಪ್ಪಾಗಿ ವರ್ತಿಸಲು ಪ್ರಯತ್ನಿಸುತ್ತಾರೆ. ಕೆಲವು ಪುರುಷರ ಉದ್ದೇಶಗಳು ಸಹ ಒಳ್ಳೆಯದಲ್ಲ. ಆದರೆ, ಎಲ್ಲ ಪುರುಷರಿಗೂ ಕೆಟ್ಟ ಉದ್ದೇಶವಿರುತ್ತದೆ ಎಂದಲ್ಲ ಎಂದು ಹೇಳಿದರು.

ಅಕ್ಟೋಬರ್ 28ರಂದು ನಡೆದ ಮಹಿಳಾ ಆಯೋಗದ ಸಭೆಯ ನಂತರ, ಹಾಗೆಯೇ ಸದ್ಯ ಇದು ಕೇವಲ ಪ್ರಸ್ತಾವನೆಯಾಗಿದ್ದು, ನಂತರ ಮಹಿಳಾ ಆಯೋಗ ಈ ಬಗ್ಗೆ ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಿದೆ. ಮಹಿಳಾ ಆಯೋಗದ ನಿಯಮಗಳನ್ನು ಪಾಲಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next