ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದರ್ಭಾಂಗಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಸ್ಪರ್ಶಿಸಿದಾಗ ಎಲ್ಲರೂ ಆಶ್ಚರ್ಯಚಕಿತರಾದರು.
ಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, 73 ವರ್ಷದ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು 74 ರ ಹರೆಯದ ಪ್ರಧಾನಿ ಮೋದಿಯವರತ್ತ ಆಗಮಿಸಿ ಪಾದಗಳನ್ನು ಮುಟ್ಟಿ ನಮಸ್ಕರಿಸಲು ಪ್ರಯತ್ನಿಸಿದರು. ಈ ರೀತಿ ನಿತೀಶ್ ವಿಶೇಷ ಗೌರವ ನೀಡುತ್ತಿರುವುದು ಈ ವರ್ಷ ಮೂರನೇ ಬಾರಿ ಎನ್ನುವುದು ವಿಶೇಷ. ಪ್ರಧಾನಿ ಮೋದಿ ಅವರು ಜೆಡಿಯು ನಾಯಕ ಪಾದಗಳನ್ನು ಮುಟ್ಟದಂತೆ ತ್ವರಿತವಾಗಿ ನಿಲ್ಲಿಸಿ ಕೈಕುಲುಕಿದರು.
ದರ್ಭಾಂಗಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಏಮ್ಸ್ಗೆ ಅಡಿಗಲ್ಲು ಹಾಕಿ ಸುಮಾರು 12,100 ಕೋಟಿ ರೂಪಾಯಿ ಮೌಲ್ಯದ ಹಲವಾರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು.
ನಿತೀಶ್ ಕುಮಾರ್ ಅವರು ಬಿಹಾರವನ್ನು ಪರಿವರ್ತಿಸಿ ಜಂಗಲ್ ರಾಜ್ ನಿಂದ ಹೊರತಂದಿದ್ದಾರೆ.ಸುಶಾಸನ ಸ್ಥಾಪಿಸಿದ್ದಾರೆ. ಎನ್ಡಿಎ ಆಡಳಿತದಲ್ಲಿ ಬಿಹಾರದ ಆರೋಗ್ಯ ಮೂಲಸೌಕರ್ಯದಲ್ಲಿನ ಸುಧಾರಣೆಗಳಾಗಿವೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು,
ಜೂನ್ನಲ್ಲಿ, ನಿತೀಶ್ ಕುಮಾರ್ ಅವರು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಮೋದಿಯವರ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸಿ ನೆರೆದಿದ್ದವರೆಲ್ಲರನ್ನು ಆಶ್ಚರ್ಯಗೊಳಿಸಿದ್ದರು. ಏಪ್ರಿಲ್ನಲ್ಲೂ ನವಾಡದಲ್ಲಿ ನಡೆದ ಲೋಕಸಭಾ ಚುನಾವಣಾ ರ್ಯಾಲಿಯಲ್ಲೂ ಪ್ರಧಾನಿ ಮೋದಿಯವರ ಪಾದಗಳನ್ನು ಸ್ಪರ್ಶಿಸಿದ್ದರು.