Advertisement

ಇತಿಹಾಸದ ಪುಟ ಸೇರಿದ ವಿಶ್ವದ ಅತಿ ದೊಡ್ಡ “ಪಿಂಕ್ ಡೈಮಂಡ್” ಗಣಿ ಸ್ಥಗಿತ

06:40 PM Nov 03, 2020 | Nagendra Trasi |

ಸಿಡ್ನಿ: ವಿಶ್ವದ ಅತಿ ದೊಡ್ಡ ನಸುಗೆಂಪು (ಪಿಂಕ್) ಬಣ್ಣದ ವಜ್ರದ ಗಣಿಯಲ್ಲಿನ ವಜ್ರದ ನಿಕ್ಷೇಪ ಖಾಲಿಯಾದ ಹಿನ್ನೆಲೆಯಲ್ಲಿ ಶಾಶ್ವತವಾಗಿ ಗಣಿಯನ್ನು ಮುಚ್ಚಲಾಗಿದೆ ಎಂದು ಜಾಗತಿಕ ಗಣಿಗಾರಿಕೆ ಸಂಸ್ಥೆ ರಿಯೋ ಟಿಂಟೋ ಮಂಗಳವಾರ(ನವೆಂಬರ್ 3, 2020) ತಿಳಿಸಿದೆ.

Advertisement

ಪಶ್ಚಿಮ ಆಸ್ಟ್ರೇಲಿಯಾದ ಹೊರವಲಯದಲ್ಲಿರುವ ಕಿಂಬರ್ಲಿ ಪ್ರದೇಶದಲ್ಲಿರುವ ಅರ್ಗೈಲ್ ಗಣಿಯ ಮೂಲಕ ಜಗತ್ತಿನ ಶೇ.90ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ನಸುಗೆಂಪು ಬಣ್ಣದ ವಜ್ರವನ್ನು ಹೊರತೆಗೆಯಲಾಗಿತ್ತು ಎಂದು ವರದಿ ವಿವರಿಸಿದೆ.

1979ರಲ್ಲಿ ಈ ಪ್ರದೇಶದಲ್ಲಿ ಅತ್ಯಪರೂಪದ ವಜ್ರದ ನಿಕ್ಷೇಪ ಪತ್ತೆ ಹಚ್ಚಲಾಗಿತ್ತು. ಇದಾದ ಸುಮಾರು ನಾಲ್ಕು ವರ್ಷದ ನಂತರ ಆ್ಯಂಗ್ಲೋ ಆಸ್ಟ್ರೇಲಿಯಾ ಮೂಲದ ಕಂಪನಿ ಗಣಿಗಾರಿಕೆ ಆರಂಭಿಸಿತ್ತು. ಸುಮಾರು 37 ಕಾಲ ಗಣಿಗಾರಿಕೆಯಲ್ಲಿ ಕೋಟ್ಯಂತರ ಕ್ಯಾರೆಟ್ ನಷ್ಟು ಕಚ್ಚಾ ವಜ್ರವನ್ನು ಹೊರತೆಗೆಯಲಾಗಿತ್ತು.

ಇದನ್ನೂ ಓದಿ:ಅಂತಿಮ ಸುತ್ತಿನ ಮತದಾನ ಶುರು: ಮಹಾಸಮರ-ಅಮೆರಿಕದ ಗದ್ದುಗೆ ಯಾರಿಗೆ? ಸಮೀಕ್ಷೆಯಲ್ಲೇನಿದೆ

Advertisement

ಗಣಿಯಲ್ಲಿ ನಸುಗೆಂಪು ವಜ್ರದ ನಿಕ್ಷೇಪ ಖಾಲಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಗಣಿ ಮುಚ್ಚಲು ಸುಮಾರು ಐದು ವರ್ಷಗಳ ಕಾಲಾವಕಾಶ ತೆಗೆದುಕೊಂಡಿರುವುದಾಗಿ ರಿಯೋ ವಿವರಿಸಿದೆ.

ನಾವು ಈ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸುವ ಮೂಲಕ ಇಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಲು ಅನುವು ಮಾಡಿಕೊಡುತ್ತಿದ್ದೇವೆ. ಈ ಭೂಮಿಯನ್ನು ಮೂಲ ವಾರಸುದಾರರಿಗೆ ಮರಳಿಸುವುದಾಗಿ ಗಣಿ ಮ್ಯಾನೇಜರ್ ಆ್ಯಂಡ್ರ್ಯೂ ವಿಲ್ಸತ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next