Advertisement

‘ನಮ್ಮ ವಿಷಯದಿಂದ ದೂರವಿದ್ದರೆ ಒಳಿತು’ : ಬೈಡನ್‌ಗೆ ಉತ್ತರ ಕೊರಿಯಾ ಎಚ್ಚರಿಕೆ

07:31 PM Mar 16, 2021 | Team Udayavani |

ನವದೆಹಲಿ: “ನೀವು ನೆಮ್ಮದಿಯಿಂದ ನಿದ್ರಿಸುವುದನ್ನು ಬಯಸುವುದಾದರೆ, ನಮ್ಮ ವಿಷಯದಿಂದ ದೂರವಿದ್ದರೆ ಒಳಿತು’ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರ ಸಹೋದರಿ ಕಿಮ್‌ ಯೊ ಜಾಂಗ್‌, ಅಮೆರಿಕದ ಅಧ್ಯಕ್ಷ ಜೊ ಬೈಡೆನ್‌ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಅಮೆರಿಕದ ಪೆಂಟಗಾನ್‌ ಮುಖ್ಯಸ್ಥ ಲಾಯ್ಡ ಆಸ್ಟಿನ್‌, ಗೃಹ ಇಲಾಖೆಯ ಅಟಾರ್ನಿ ಅಂತೋನಿ ಬ್ಲಿಂಕನ್‌ ಜೋಡಿ, ಜಪಾನ್‌ಗೆ ಸೋಮವಾರ ಭೇಟಿ ನೀಡಿದೆ. ಉತ್ತರ ಕೊರಿಯಾ, ಚೀನಾದ ಪ್ರಾಬಲ್ಯವನ್ನು ಮುರಿಯಲು ಆ ದೇಶಗಳ ವಿರೋಧಿ ಬಣವನ್ನು ಸಂಘಟಿಸುವುದು ಈ ಭೇಟಿಯ ಉದ್ದೇಶ.

ಈ ಹಿನ್ನೆಲೆಯಲ್ಲಿ, ಕಿಮ್‌ ಯೊ ಜಾಂಗ್‌, “ಮುಂದಿನ ನಾಲ್ಕು ವರ್ಷಗಳವರೆಗೆ ನೀವು ನಿಶ್ಚಿಂತೆಯಿಂದ ನಿದ್ರಿಸಬೇಕಾದರೆ, ಈಗ ಆರಂಭಿಸಿರುವ ಕೆಲಸವನ್ನು ಕೈಬಿಡಿ” ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ :ಪೆಟ್ರೋಲ್, ಡಿಸೇಲ್ : GST ವ್ಯಾಪ್ತಿಗೆ ಇಲ್ಲ : ನಿರ್ಮಲಾ ಸೀತಾರಾಮನ್| News Bulletin

Advertisement

Udayavani is now on Telegram. Click here to join our channel and stay updated with the latest news.

Next