Advertisement

ಮತ್ತೂಮ್ಮೆ ಕ್ಷಿಪಣಿ ಉಡಾವಣೆ ಮಾಡಿದ ಉತ್ತರ ಕೊರಿಯಾ

09:11 AM Mar 30, 2020 | Hari Prasad |

ಸಿಯೋಲ್‌: ಜಗತ್ತಿನಾದ್ಯಂತ ಕೋವಿಡ್ 19 ವೈರಸ್ ಹಾಹಾಕಾರ ಎದ್ದಿರುವ ನಡುವೆಯೇ ಉತ್ತರ ಕೊರಿಯಾ ಭಾನುವಾರ ಎರಡು ಖಂಡಾಂತರ ಕ್ಷಿಪಣಿಗಳ ಪ್ರಯೋಗ ನಡೆಸಿದೆ. ಈ ಬಗ್ಗೆ ದಕ್ಷಿಣ ಕೊರಿಯಾ ಖಚಿತಪಡಿಸಿದೆ. ಉತ್ತರ ಕೊರಿಯಾದ ಪೂರ್ವ ಕರಾವಳಿ ನಗರವಾದ ವೊನ್ಸಾನ್‌ನಿಂದ ಕೊರಿಯಾದ ಪರ್ಯಾಯ ದ್ವೀಪ ಮತ್ತು ಜಪಾನ್‌ ನಡುವಿನ ನೀರಿನಲ್ಲಿ ಸ್ಫೋಟಕಗಳನ್ನು ಪತ್ತೆ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾ ಸರಕಾರ ಖಚಿತಪಡಿಸಿದೆ.

Advertisement

ನ್ಪೋಟಕಗಳು ಗರಿಷ್ಠ 30 ಕಿಲೋಮೀಟರ್‌ ಎತ್ತರದಲ್ಲಿ ಸುಮಾರು 230 ಕಿಲೋಮೀಟರ್‌ ಹಾರಿವೆ ಎಂದಿರುವ ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಗುಪ್ತಚರ ಅಧಿಕಾರಿಗಳು, ಉಡಾವಣೆಯ ಹೆಚ್ಚಿನ ವಿವರಗಳನ್ನು ವಿಶ್ಲೇಷಿಸುತ್ತಿದ್ದಾರೆ.

ಜಗತ್ತು ಕೋವಿಡ್ 19 ವೈರಸ್ ವಿಪತ್ತಿನಲ್ಲಿರುವಾಗ ಉತ್ತರ ಕೊರಿಯಾ ಇಂಥ ಹುಚ್ಚು ಸಾಹಸ ನಡೆಸುವುದು ಸರಿಯಲ್ಲ. ಇಂತಹ ಮಿಲಿಟರಿ ಕ್ರಮವನ್ನು ನಿಲ್ಲಿಸಬೇಕೆಂದು ಅದು ಉತ್ತರ ಕೊರಿಯಾವನ್ನು ಒತ್ತಾಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉತ್ತರ ಕೊರಿಯಾ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ಸ್ಪಷ್ಟ ಪ್ರಯತ್ನದಲ್ಲಿ ಕ್ಷಿಪಣಿಗಳು ಮತ್ತು ಫಿರಂಗಿ ಚಿಪ್ಪುಗಳನ್ನು ಹಾರಿಸಿದೆ. ಉತ್ತರ ಕೊರಿಯಾದ ನಾಯಕ ಕಿಮ್‌ ಜೊಂಗ್‌ ಉನ್‌ ಮತ್ತು ಅಧ್ಯಕ್ಷ ಡೊನಾಲ್ಡ್‌ ನಡುವಿನ ಎರಡನೇ ಶೃಂಗಸಭೆಯ ನಂತರ ಮಾತುಕತೆ ಕೂಡ ಸ್ಥಗಿತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next