ಬೆಂಗಳೂರು: ಕೇರಳದ ವಯನಾಡು ಜಿಲ್ಲೆ ಯಲ್ಲಿ ನ್ಯೂರೋ ವೈರಾಣು ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗಡಿಯ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.
ಸೋಂಕು ಕಲುಷಿತ ಆಹಾರ, ಕಲುಷಿತ ನೀರಿನಿಂದ ಹರಡಬಹುದು. ವಾಂತಿ-ಭೇದಿ, ವಾಕರಿಕೆ, ಹೊಟ್ಟೆ ನೋವು, ತಲೆ ನೋವು, ಮೈ-ಕೈ ನೋವು ಮತ್ತು ಸಾಧಾ ರಣ ಜ್ವರ ಲಕ್ಷಣಗಳು.
ಗಡಿ ಜಿಲ್ಲೆಗಳಲ್ಲಿ ಕ್ರಮಗಳು
ಕಾಯಿಲೆಯು ತೀವ್ರ ಅತಿಸಾರ ಮತ್ತು ನಿರ್ಜಲೀ ಕರಣಕ್ಕೆ ಕಾರಣ ವಾಗುತ್ತದೆ. ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಿ ಭೇದಿಯ ಚಿಕಿತ್ಸೆ ಯನ್ನು ನೀಡಬೇಕು.
ಇದನ್ನೂ ಓದಿ:ವೀಡೀಯೊ ಕಾಲ್‌ನಲ್ಲಿ ಚೀನದ ಟೆನ್ನಿಸ್ ಆಟಗಾರ್ತಿ ಪೆಂಗ್ ಶುಯಿ ಪ್ರತ್ಯಕ್ಷ
ಸೋಂಕುಪೀಡಿತರ ನೇರ ಸಂಪರ್ಕ ಮಾಡಬಾರದು ಮತ್ತು ಅವರು ಬಳಸಿದ ವಸ್ತುಗಳನ್ನು ಸಂಸ್ಕರಿಸದೆ ಬಳಸಬಾರದು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕು. ಜಿಲ್ಲೆಗೆ ಒಬ್ಬ ವೈದ್ಯರನ್ನು ನೋಡಲ್ ಆಗಿ ನೇಮಿಸಿ ಸೂಕ್ತ ನಿರ್ವಹಣೆ ಮಾಡಲು ಸೂಚಿಸಬೇಕು. ಕುಡಿಯುವ ನೀರಿನ ಮೂಲಗಳ ಮಾಹಿತಿಯನ್ನು ಕಲೆ ಹಾಕಿ, ಮಾದರಿ ಸಂಗ್ರಹಿಸಿ ವಿಶ್ಲೇಷಣೆ ಮಾಡಬೇಕು. ರಸ್ತೆ ಬದಿಯ ಆಹಾರ ಸೇವಿಸಬಾರದು ಎಂದು ಸೂಚನೆ ನೀಡಿದೆ.