Advertisement
ಟಿ.ಎ.ಪೈ ಅವರು ಏಕಕಾಲದಲ್ಲಿ ಕೇಂದ್ರದ ಐದು ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದುದು ಒಂದು ದಾಖಲೆ. ಕರಾವಳಿಗೂ ದಿಲ್ಲಿಗೂ ಸಂಪರ್ಕ ಬೇಕೆಂಬ ಕಾರಣಕ್ಕೆ “ಜಯಂತಿ ಜನತಾ ಎಕ್ಸ್‌ಪ್ರೆಸ್’ ರೈಲು ಆರಂಭಿಸಿದ ಟಿ.ಎ. ಪೈಯವರು, ಉಡುಪಿ ಪುರಸಭೆ ಡಾ|ವಿ.ಎಸ್.ಆಚಾರ್ಯರ ನೇತೃತ್ವದಲ್ಲಿ ಆಡಳಿತದಲ್ಲಿದ್ದಾಗ ಸ್ವರ್ಣಾ ಮೊದಲ ಹಂತದ ಯೋಜನೆಗೆ ಎಲ್‌ಐಸಿ ಅಧ್ಯಕ್ಷರಾಗಿ ಸಾಲ ಕೊಟ್ಟು ಮತ ರಾಜಕೀಯ ಬೇರೆ, ಅಭಿವೃದ್ಧಿ ಬೇರೆ ಎಂದು ತೋರಿಸಿದವರು. ಕೊಂಕಣ ರೈಲ್ವೇಯ ಕನಸು ಮೊದಲು ಕಂಡದ್ದು ಇವರೇ. ಈಗೇನಾದರೂ ಎಲ್‌ಐಸಿ ಮುಂಚೂಣಿ ವಿಮಾ ಸಂಸ್ಥೆಯಾಗಿ ಮುನ್ನಡೆಯುತ್ತಿದ್ದರೆ ಇದರ ಹಿಂದೆ ಟಿ.ಎ.ಪೈ ಅವರ ಪ್ರಾಮಾಣಿಕ ಶ್ರಮವಿದೆ. ಯಾವುದೇ ನಷ್ಟದಾಯಕ ಸಂಸ್ಥೆಗಳನ್ನು ಇವರಿಗೆ ಕೊಟ್ಟರೆ ಅದನ್ನು ಮುನ್ನಡೆಸುವ ರೀತಿಯೇ ಬೇರೆಯಾಗಿತ್ತು. “ಹೀಗಾಗಿಯೇ ಮಣಿಪಾಲ ಸಮೂಹ ಸಂಸ್ಥೆಗಳ ಸ್ಥಾಪಕ ಡಾ| ಟಿ.ಎಂ.ಎ.ಪೈಯವರಿಗೆ ತಮ್ಮ ಅಣ್ಣನ ಮಗ ಟಿ.ಎ.ಪೈ ಅವರು ರಾಜಕೀಯದಲ್ಲಿ ಸಕ್ರಿಯ ರಾಗುತ್ತಿದ್ದುದು ಅಷ್ಟು ಹಿಡಿಸುತ್ತಿರಲಿಲ್ಲ. ನಮ್ಮ ಸಂಸ್ಥೆಗಳಲ್ಲಿಯೇ ಸಾಕಷ್ಟು ಕೆಲಸಗಳಿವೆ. ಇಲ್ಲಿಯೇ ಇದ್ದು ಅಭಿವೃದ್ಧಿಪಡಿಸು ಎನ್ನುತ್ತಿದ್ದರು’ ಎಂದು ಟಿ.ಎ.ಪೈಯವರ ಕುರಿತಾದ ಪುಸ್ತಕ ಅನಾವರಣ ಸಭೆಯಲ್ಲಿ ಡಾ|ಆಚಾರ್ಯ ಹೇಳಿದ್ದರು.
Related Articles
Advertisement
ಮೂವರೂ ಬಹುಕಾಲ ರಾಜಕೀಯ ಮಾಡಿ ದರೂ ವೈಯಕ್ತಿಕ ಟೀಕೆ, ಅವಹೇಳನ ಮಾಡಿ ರಲಿಲ್ಲ. ಬೇರೆ ಪಕ್ಷದವರ ಜತೆಗಿನ ನಡವಳಿಕೆಯಲ್ಲಿ ಸೌಜನ್ಯವಿರುತ್ತಿತ್ತು. ಇವರೆಲ್ಲ ರಾಜಕಾರಣಿಗಳಾ ದರೂ ರಾಜಕಾರಣದ ನೇತ್ಯಾತ್ಮಕ ಅಂಶಗಳನ್ನು ಮೈಗೆ ಮೆತ್ತಿಕೊಂಡವರಲ್ಲ. ಇವರಿಗೆ ರಾಜಕೀಯ ಎನ್ನುವುದು ಲೋಕೋಪಕಾರಕ್ಕೆ ಸಾಧನ ಮಾತ್ರ ಎನ್ನಬಹುದು.
ನಮಗೆ ರಾಜಕಾರಣಿ ಮತ್ತು ಮುತ್ಸದ್ದಿಗಳ ವ್ಯತ್ಯಾ ಸದ ಅರಿವಿಲ್ಲ. ಅರಿವಿದ್ದರೂ ಸೋಲು ಗೆಲುವುಗಳ ಲೆಕ್ಕಾಚಾರ ಬಂದಾಗ ಮುತ್ಸದ್ದಿಗಳು ಪ್ರಯೋಜನಕ್ಕೆ ಬಾರದ ವ್ಯಕ್ತಿಗಳಾಗುವ ಸಂಭವವಿದೆ. ಮುತ್ಸದ್ದಿ ಗಳು ಮರಣಾನಂತರ ಪೂಜಾರ್ಹರಾಗುತ್ತಾರೆ. ಜೀವಂತವಿರುವಾಗ ಕೆಲವೊಮ್ಮೆ ತಮಾಶೆಯ ವಸ್ತುವಾಗುತ್ತಾರೆ. ಹೀಗಾಗಿ ಮುತ್ಸದ್ದಿಗಳಾಗುವ ಯೋಗ್ಯತೆ ಇರುವವರೂ ಅದು ದಿಢೀರ್ ಗೆಲುವು ತಾರದ ಕಿರೀಟ ಎಂದು ತಿಳಿದು ಅಡ್ಡಮಾರ್ಗ ತುಳಿಯುತ್ತಾರೆ. ಲೋಕಕ್ಕೆ ಒಳಿತಾಗಬೇಕಾದರೆ ಮುತ್ಸದ್ದಿತನಕ್ಕೆ ಗೌರವ ಸಿಗುವಂತಾಗಬೇಕು. ಇಲ್ಲವಾದರೆ ಕಳಪೆ ರಾಜಕೀಯವೇ ಜೀವನಾದರ್ಶ ವಾಗುವ ಅಪಾಯವಿದೆ.
ಡಾ|ಆಚಾರ್ಯ ಚುನಾವಣೆಯಲ್ಲಿ ಸೋತಾಗ ಮನೆ ಎದುರು ಕೆಲವರು “ಮರಣ’ದ ಸಂಕೇತವನ್ನು ಬಿಂಬಿಸಿದ್ದೂ ಮತ್ತು ಆಸ್ಕರ್ ಫೆರ್ನಾಂಡಿಸರು ನಿಧನ ಹೊಂದಿದಾಗ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಮಾಹಿತಿಯೂ ಮಾನವೀಯ ಮುಖದ್ದಲ್ಲ.
ಡಾ|ಆಚಾರ್ಯರು ನಿಧನ ಹೊಂದಿದಾಗ ಆಸ್ಕರ್ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದರು. ಈ ಸತ್ಸಂಪ್ರದಾಯ ಆಸ್ಕರ್ ನಿಧನ ಹೊಂದಿದಾಗ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯುವ ಮೂಲಕ ಮುಂದುವರಿಯಿತು. ಇಂತಹವರ ರಾಜಕೀಯವಿಲ್ಲದ ರಾಜಕಾರಣಕ್ಕೆ “ಮರಣ’ ಬರಕೂಡದು ಎಂಬ ಜಾಗೃತಿ ಸಮಾಜದಲ್ಲಿರಬೇಕು.
– ಮಟಪಾಡಿ ಕುಮಾರಸ್ವಾಮಿ