Advertisement

Railway Station ಕನ್ನಡವಿಲ್ಲದ ಫಲಕ ವಿವಾದ: ಒತ್ತಡಕ್ಕೆ ಮಣಿದು ಫ‌ಲಕ ತೆರವು

10:27 PM Oct 14, 2023 | Team Udayavani |

ಮಂಗಳೂರು: ದಕ್ಷಿಣ ರೈಲ್ವೇ ತನ್ನ ವ್ಯಾಪ್ತಿಗೆ ಬರುವ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಕನ್ನಡ ಭಾಷೆ ಇಲ್ಲದ ಫಲಕವೊಂದನ್ನು ಅಳವಡಿಸುವ ಮೂಲಕ ವಿವಾದಕ್ಕೆ ಕಾರಣವಾಗಿದೆ.

Advertisement

ಮಲಯಾಳಂ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರವೇ “ಮಂಗಳೂರ್‌ ಜಂಕ್ಷನ್‌ ರನ್ನಿಂಗ್‌ ರೂಂ’ ಎನ್ನುವ ಫಲಕವನ್ನು ಹೊಸದಾಗಿ ಅಳವಡಿಸಲಾಗಿತ್ತು. ಇದನ್ನು ನೋಡಿದ ರೈಲ್ವೇ ಸಂಘಟನೆಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ಪಾಲಕ್ಕಾಡ್‌ ವಿಭಾಗದ ಅಧಿಕಾರಿ ಗಳಿಗೆ ಈ ವಿಚಾರವಾಗಿ ದೂರು ಸಲ್ಲಿಸಿದ್ದಾರೆ.

ಅಲ್ಲದೆ ಸಾಮಾಜಿಕ ಜಾಲ ತಾಣ ಗಳಲ್ಲೂ ಪ್ರಕಟಿಸಿ ವಿಚಾರವನ್ನು ರೈಲ್ವೇ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಒತ್ತಡಕ್ಕೆ ಮಣಿದ ಅಧಿಕಾರಿಗಳು ಶನಿವಾರವೇ ಹಾಕಲಾದ ಕನ್ನಡ ರಹಿತ ಫಲಕವನ್ನು ತೆರವುಗೊಳಿಸಿದ್ದಾರೆ.
ಹೊಸ ಫಲಕದಲ್ಲಿ ಕನ್ನಡ ಭಾಷೆ ಇರಲೇಬೇಕು ಎಂದು ಸ್ಥಳೀಯ ರೈಲ್ವೇ ಬಳಕೆದಾರರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next