Advertisement

ಶಾಸಕರ ಕೊರಳಲ್ಲಿ ರಾರಾಜಿಸಿದ ಕನ್ನಡಾಂಬೆಯ ಶಾಲು

01:41 AM Dec 13, 2024 | Team Udayavani |

ಬೆಳಗಾವಿ: ಮಂಡ್ಯದಲ್ಲಿ ಡಿ. 20ರಿಂದ 3 ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿ ಗಣ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಕಸಾಪ ಅಧ್ಯಕ್ಷ ಮಹೇಶ ಜೋಶಿ ಮತ್ತು ಮಂಡ್ಯ ಜಿಲ್ಲಾಧಿಕಾರಿ ಡಾ| ಕುಮಾರ್‌ ಸೇರಿ ಮಂಡ್ಯ ಜಿಲ್ಲೆಯ ಶಾಸಕರು ಬೆಳಗಾವಿಯ ಸುವರ್ಣ ಸೌಧದಲ್ಲಿ ಗುರುವಾರ ಅಧಿಕೃತ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.

Advertisement

ಕಲಾಪದಲ್ಲಿ ಕನ್ನಡ ಶಾಲು
ಈ ವೇಳೆ ಎಲ್ಲ ಶಾಸಕರು, ಪರಿಷತ್‌ ಸದಸ್ಯರಿಗೆ ಆಹ್ವಾನದ ಜತೆಗೆ ಕನ್ನಡ ಶಾಲನ್ನು ನೀಡಲಾಯಿತು. ಸ್ಪೀಕರ್‌ ಯು.ಟಿ. ಖಾದರ್‌ ಸಹಿತ ಉಭಯ ಸದನಗಳಲ್ಲಿ ಎಲ್ಲ ಸದಸ್ಯರು ಕನ್ನಡ ಶಾಲನ್ನು ಧರಿಸಿದ್ದು ವಿಶೇಷವಾಗಿತ್ತು.

 

 

Advertisement

Udayavani is now on Telegram. Click here to join our channel and stay updated with the latest news.

Next