Advertisement

ಯೆಸ್‌ ಸರ್‌ ಅಲ್ಲ, ಜೈ ಹಿಂದ್‌

03:41 AM Jan 02, 2019 | Team Udayavani |

ಅಹಮದಾಬಾದ್‌: ಗುಜರಾತ್‌ನ ಶಾಲೆಗಳಲ್ಲಿ ಈಗ ಶಿಕ್ಷಕರು ಹಾಜರಿ ಕರೆಯುವಾಗ ವಿದ್ಯಾಥಿìಗಳು “ಯೆಸ್‌ ಸರ್‌’, “ಯೆಸ್‌ ಟೀಚರ್‌’ ಎಂದು ಹೇಳುವಂತಿಲ್ಲ. ಅದರ ಬದಲಾಗಿ, “ಜೈ ಹಿಂದ್‌’ ಅಥವಾ “ಜೈ ಭಾರತ್‌’ ಎಂದೇ ಹೇಳಬೇಕು. ಗುಜರಾತ್‌ ಸರಕಾರವು ಈ ಕುರಿತ ಆದೇಶದ ಸುತ್ತೋಲೆಯನ್ನು ಎಲ್ಲ ಶಾಲೆಗಳಿಗೂ ಕಳುಹಿಸಿದ್ದು, ಮಂಗಳವಾರದಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ. ಇದೇ ವೇಳೆ, ಬಿಜೆಪಿ ಸರ್ಕಾರದ ಈ ನಿರ್ಧಾರ ವಿವಾದಕ್ಕೆ ಕಾರಣವಾಗಿದ್ದು, ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

Advertisement

ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ದೇಶ ಭಕ್ತಿಯ ಭಾವನೆ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, 1ರಿಂದ 12ನೇ ತರಗತಿ ವರೆಗೆ ಎಲ್ಲರೂ ಈ ನಿಯಮವನ್ನು ಅನು ಸರಿಸಬೇಕು ಎಂದು ಶಿಕ್ಷಣ ಸಚಿವ ಭೂಪೇಂದ್ರ ಸಿನ್ಹ ಚೂಡ ಸಾಮ ತಿಳಿಸಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್‌, “ಸರಕಾರವು ಮೊದಲು ಕುಗ್ಗುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸಬೇಕು.

ಇಂತಹ ನಿಯಮಗಳನ್ನು ಜಾರಿ ಮಾಡುವುದರಿಂದ, ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿದಂತಾಗುವುದಿಲ್ಲ’ ಎಂದಿದೆ. ಇನ್ನೊಂದೆಡೆ, ಪಟೇಲ್‌ ಮೀಸಲು ಹೋರಾಟಗಾರ ಹಾರ್ದಿಕ್‌ ಪಟೇಲ್‌ ಕೂಡ ಪ್ರತಿಕ್ರಿಯಿಸಿದ್ದು, “ಗುಜರಾತ್‌ನ ಮಕ್ಕಳು ಮತ್ತು ಯುವಕರ ರಕ್ತದಲ್ಲೇ ದೇಶ ಭಕ್ತಿಯಿದೆ. ಅದನ್ನು ತೋರ್ಪಡಿಸಲು ಬಲವಂತ ಮಾಡಬೇಕಾದ ಅಗತ್ಯವಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next