Advertisement

ದಿಲ್ಲಿಯಲ್ಲಿ ಸೋನಿಯಾ, ರಾಹುಲ್‌ ಭೇಟಿ ಇಲ್ಲ : ಮಾಯಾವತಿ ಸ್ಪಷ್ಟನೆ

09:10 AM May 21, 2019 | Sathish malya |

ಲಕ್ನೋ : ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ದಿಲ್ಲಿಯಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ‘ನನಗೆ ಯಾವುದೇ ದಿಲ್ಲಿ ಪ್ಲಾನ್‌ ಇಲ್ಲ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Advertisement

“ಮಾಯಾವತಿ ಜೀ ಅವರಿಗೆ ದಿಲ್ಲಿಯಲ್ಲಿ ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ; ಆಕೆ ಲಕ್ನೋದಲ್ಲೇ ಇರುತ್ತಾರೆ’ ಎಂದು ಬಿಎಸ್‌ಪಿ ನಾಯಕ ಎಸ್‌ ಸಿ ಮಿಶ್ರಾ ಹೇಳಿದ್ದಾರೆ.

ಈ ಮೊದಲು ಕೆಲವು ಮೂಲಗಳು ಮಾಯಾವತಿ ಅವರು ಲೋಕಸಭಾ ಚುನಾವಣೆಗಳ ಫ‌ಲಿತಾಂಶ ಪ್ರಕಟನೆಗೆ ಮುನ್ನ ದಿಲ್ಲಿಯಲ್ಲಿ ಸೋನಿಯಾ ಮತ್ತು ರಾಹುಲ್‌ ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿ ಮಾಡಿದ್ದವು.

ಈ ನಡುವೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್‌ ಚಂದ್ರಬಾಬು ನಾಯ್ಡು ಅವರು ಈಗಾಗಲೇ ಬಿಜೆಪಿ ವಿರೋಧಿ ರಂಗವನ್ನು ರೂಪಿಸುವ ನಿಟ್ಟಿನಲ್ಲಿ ಮಾಯಾವತಿ ಮತ್ತು ಎಸ್‌ ಪಿ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಅವರನ್ನು ಲಕ್ನೋದಲ್ಲಿ ಮೊನ್ನೆ ಶನಿವಾರ ಭೇಟಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next