ಮೈಸೂರು: ಹಿಂದೂ ದೇವಾಲಯಗಳ ಕಾಣಿಕೆಯನ್ನು ಹಿಂದೂ ದೇವಲಾಯಗಳ ಅಭಿವೃದ್ಧಿ ಬಳಕೆ ಮಾಡಬೇಕು. ಅದರ ಬದಲು ಚರ್ಚು ಮಸೀದಿ ಅಭಿವೃದ್ಧಿ ಬಳಕೆ ಮಾಡಬೇಕೆ? ಇದಕ್ಕೆ ಯಾವ ದೊಣ್ಣೆ ನಾಯಕ ಅಪ್ಪಣೆಯೂ ಬೇಡ. ಈ ವಿಷಯದಲ್ಲಿ ಇವರು ನಮಗೆ ಪಾಠ ಹೇಳಿಕೊಡುವುದು ಬೇಡ ಎಂದು ಸಂಸದ ಪ್ರತಾಪ್ ಸಿಂಹ ಗುಡುಗಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವ್ಯವಾದ ಚರ್ಚ್ ನಿರ್ಮಾಣ ಮಾಡುತ್ತಾರಲ್ಲ, ಅದಕ್ಕೆ ಹಣ ಎಲ್ಲಿಂದ ಬರಬೇಕು. ಮಸೀದಿಗೆ, ಹಜ್ ಗೆ ಹಿಂದೂಗಳು ಹಾಕಿದ ಕಾಣಿಕೆ ಹಣ ಯಾಕೆ ಕೊಡಬೇಕು ಎಂದರು.
ಇದನ್ನೂ ಓದಿ:ರಾಮ ಇಲ್ಲ, ಹನುಮಂತ ಇಲ್ಲ ಎಂಬ ಸ್ಟೇಟಸ್ :ಕೋಮು ಘರ್ಷಣೆ,ಇಬ್ಬರಿಗೆ ಚೂರಿ ಇರಿತ,10 ಜನರಿಗೆ ಗಾಯ
ಹೀಗಾಗಿ ಹಿಂದೂ ದೇವಾಲಯಗಳು ಸರ್ಕಾರಿ ಸ್ವಾಮ್ಯದಲ್ಲಿರುವವುದು ಬೇಡ. ದೇವಸ್ಥಾನದಲ್ಲಿ ಸಂಗ್ರಹವಾದ ಹುಂಡಿ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ವೆಚ್ಚಮಾಡಬೇಕೆಂದು ಈ ತೀರ್ಮಾನ ಮಾಡಿದ್ದಾರೆ ಎಂದ ಸಂಸದ ಪ್ರತಾಪ್ ಸಿಂಹ ಹೇಳಿದರು.
ಯಾತ್ರೆ ಜಾತ್ರೆ ಬೇಡ: ಚುನಾವಣೆ ಹತ್ತಿರ ಬಂತೆಂದು ಕಾಂಗ್ರೆಸ್ ನವರು ಗಿಮಿಕ್ ಆರಂಭಿಸಿದ್ದಾರೆ. ನಾವು ಭವಿಷ್ಯ ದೃಷ್ಟಿಯಿಂದ ಮೇಕೆದಾಟು ಯೋಜನೆ ಪರವಾಗಿ ಇದ್ದೇವೆ. ಜನರು ಕಾಂಗ್ರೆಸ್ ನವರ ಗಿಮಿಕ್ ಗೆ ಬೆಲೆ ಕೊಡಲ್ಲ. ಕೊರೊನಾ ಮೂರನೇ ಅಲೆ ಸಂದರ್ಭದಲ್ಲಿ ಯಾತ್ರೆ ಅಂತ ಜಾತ್ರೆ ಮಾಡಬೇಡಿ. ಮತ್ತೆ ಸೋಂಕು ಸಂಖ್ಯೆ ಹೆಚ್ಚಾದರೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ. ಜನ ನಿಮ್ಮ ಉದ್ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ. ಇಂತಹ ಗಿಮಿಕ್ ಯಾತ್ರೆ ಕೈಬಿಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.