Advertisement

ದೂರಗಾಮಿ ಯೋಜನೆಗಳಿಲ್ಲ

05:49 AM Feb 09, 2019 | Team Udayavani |

ಬೆಂಗಳೂರಿನಲ್ಲಿ ನೀರಿನ ಮೂಲಗಳ ಅಭಿವೃದ್ಧಿ ಹಾಗೂ ಮಳೆನೀರು ಕಾಲುವೆಗಳಿಗೆ ತ್ಯಾಜ್ಯನೀರು ಸೇರಿದಂತೆ ಕ್ರಮಕೈಗೊಳ್ಳಲು ಯೋಜನೆ ರೂಪಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಪ್ರತಿಯೊಂದು ಬಜೆಟ್‌ನಲ್ಲಿ ಮೇಲ್ಸೇತುವೆಗಳು, ಅಂಡರ್‌ಪಾಸ್‌ಗಳು ಹೀಗೆ ನಾನಾ ಯೋಜನೆಗಳನ್ನು ಘೋಷಿಸಿವುದು ಸಾಮಾನ್ಯ.

Advertisement

ಆದರೆ, ಈ ಬಾರಿ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಯನ್ನು ಅರಿತು ಜಲಮೂಲಗಳ ಸಂರಕ್ಷಣೆ ಹಾಗೂ ಎರಡು ನದಿಗಳ ಪುನಶ್ಚೇತನಕ್ಕೆ ಆದ್ಯತೆ ನೀಡಿರುವುದು ಉತ್ತಮ ಅಂಶವಾಗಿದೆ. ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಹೆಬ್ಟಾಳ, ಕೆ.ಆರ್‌.ಪುರ ಮೇಲ್ಸೇತುವೆಗಳ ಹೆಚ್ಚುವರಿಯಾಗಿ ಲೂಪ್‌ ನಿರ್ಮಾಣ ಯೋಜನೆ ಉತ್ತಮವಾಗಿದೆ. ಸರ್ಕಾರ ಬಿಬಿಎಂಪಿಗೆ ಒದಗಿಸಿರುವ 2300 ಕೋಟಿ ರೂ.ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ, ಸಮಸ್ಯೆಗೆ ಪರಿಹಾರ ದೊರೆಯಲಿದೆ. 

ಬಜೆಟ್‌ನಲ್ಲಿ ಸಾರ್ವಜನಿಕರಿ ಸಾರಿಗೆ ವ್ಯವಸ್ಥೆಗೆ ಆದ್ಯತೆ ನೀಡುವ ಮೂಲಕ ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸುವ ಕುರಿತು ಹೇಳಿಲ್ಲ. ಜತೆಗೆ ನಗರದಲ್ಲಿನ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿತ್ತು. ಒಟ್ಟಾರೆಯಾಗಿ ಬಜೆಟ್‌ ಮಿಶ್ರ ಅಂಶಗಳನ್ನು ಒಳಗೊಂಡಿದೆ. 

* ರವಿಚಂದರ್‌, ನಗರ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next