Advertisement

ಆನೆಗೊಂದಿ ಪ್ರವಾಸೋದ್ಯಮಕ್ಕಿಲ್ಲ ಪ್ರೋತ್ಸಾಹ

08:43 PM Oct 06, 2021 | Team Udayavani |

ವರದಿ: ಕೆ. ನಿಂಗಜ್ಜ

Advertisement

ಗಂಗಾವತಿ: ತಾಲೂಕಿನ ಆನೆಗೊಂದಿ ಸೇರಿ ಪ್ರಮುಖ ಸ್ಥಳಗಳಿಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಈ ಭಾಗದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡದೇ ನಿರ್ಲಕ್ಷಿಸುತ್ತಿದೆ.

ಇಲ್ಲಿಯ ಬೆಟ್ಟಗುಡ್ಡ, ತುಂಗಭದ್ರಾ ನದಿಯ ಪಾತ್ರದ ದೃಶ್ಯ ಸೇರಿ ಪ್ರಾಕೃತಿಕ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ಧಾರ್ಮಿಕ ಮತ್ತು ನೈಸರ್ಗಿಕ ಕ್ಷೇತ್ರಗಳು ಸಮ್ಮಿಳಿತಗೊಂಡಿದ್ದು, ಧಾರ್ಮಿಕ ಮತ್ತು ಪ್ರಕೃತಿ ಪ್ರಿಯರು ನಿತ್ಯವೂ ಆಗಮಿಸುತ್ತಿದ್ದಾರೆ. ಸರಕಾರ ಇಲ್ಲಿ ಮೂಲ ಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ ಮಾಡುತ್ತಿದೆ. ಹಂಪಿ ಭಾಗದಲ್ಲಿ ಮಾತ್ರ ಪ್ರವಾಸೋದ್ಯಮ, ಪುರಾತತ್ವ, ಕನ್ನಡ ಸಂಸ್ಕೃತಿ ಇಲಾಖೆಗಳು ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತೆ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ.

ಆನೆಗೊಂದಿ ಭಾಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಊಟ, ವಸತಿ, ಸಾರಿಗೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷಿಸುತ್ತಿದೆ. ಕಿಷ್ಕಿಂದಾ ಅಂಜನಾದ್ರಿ, ವಾಲೀ ಕಿಲ್ಲಾ, ಪಂಪಾ ಸರೋವರ, ಋಷಿಮುಖ ಪರ್ವತ, ಬೆಣಕಲ್‌ ಶಿಲಾಯುಗದ ಜನರ ಶಿಲಾಸಮಾಧಿಗಳ ಮೋರ್ಯರ ಬೆಟ್ಟ, ಹೇಮಗುಡ್ಡ, ಗಂಡುಗಲಿ ಕುಮಾರರಾಮನ ಕ್ಷೇತ್ರ ಹಾಗೂ ಆನೆಗೊಂದಿಯ ಚಿಂತಾಮಣಿ, ನವವೃಂದಾವನಗಡ್ಡಿ, ಚಂಚಲಕೋಟೆ ಮತ್ತು ಆದಿಮಾನವರ ಗುಹಾಂತರ ಚಿತ್ರಗಳನ್ನು ವೀಕ್ಷಣೆ ಮಾಡಲು ಕಳೆದ ಒಂದು ದಶಕದಿಂದ ನಿತ್ಯವೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ಸಣ್ಣಪುಟ್ಟ ವ್ಯಾಪಾರ ನಡೆಸುವವರಿಗೆ ಅನುಕೂಲವಾಗಿದೆ. ಅವರ ಕುಟುಂಬ ಇಲ್ಲಿಯ ವ್ಯಾಪಾರದಿಂದ ನಡೆಯುತ್ತಿದೆ. ಸಾರಿಗೆ ಅನಾನುಕೂಲ: ಅಂಜನಾದ್ರಿಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಸ್ವಂತ ವಾಹನ ಹೊರತುಪಡಿಸಿ ಬಸ್‌ಗಳಲ್ಲಿ ಬರುವವರಿಗೆ ಸಾರಿಗೆ ವ್ಯವಸ್ಥೆ ಇಲ್ಲ.

ನಿತ್ಯವೂ ಹೊಸಪೇಟೆ, ಕೊಪ್ಪಳ ಗಂಗಾವತಿ ಭಾಗದಿಂದ ಬಸ್‌ಗಳ ವ್ಯವಸ್ಥೆ ಮಾಡಿದರೆ ಭಕ್ತರಿಗೆ ಅನುಕೂಲವಾಗುತ್ತದೆ. ಕಿಷ್ಕಿಂದಾ ಪ್ರದೇಶದ ಏಳು ಬೆಟ್ಟ ಪ್ರದೇಶ ಪ್ರಾಕೃತಿಕವಾಗಿ ಸುಂದರವಾಗಿದ್ದು, ಇಲ್ಲಿಯ ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆಗೆ ಪ್ರವಾಸಿಗರು ಆಕರ್ಷಿತರಾಗಿದ್ದಾರೆ. ಸಾಣಾಪುರ ಮತ್ತು ವಿರೂಪೂರಗಡ್ಡಿ ಋಷಿಮುಖ ಪರ್ತವದ ಹತ್ತಿರ ತುಂಗಭದ್ರಾ ನದಿಯಲ್ಲಿ ಹಲವು ವಾಟರ್‌ ಫಾಲ್ಸ್‌ಗಳಿದ್ದು, ಹಲವು ಸಿನೆಮಾಗಳ ಚಿತ್ರೀಕರಣ ಇಲ್ಲಿ ಜರುಗಿದೆ. ಇದನ್ನು ನೋಡಲು ಐಟಿಬಿಟಿ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಇವರಿಗೆ ಈ ಭಾಗದ ಗ್ರಾಮಗಳಲ್ಲಿ ಹೋಂಸ್ಟೇಗಳಲ್ಲಿ ಊಟ, ವಸತಿ ಕಲ್ಪಿಸಿ ಸ್ಥಳೀಯರು ಆದಾಯ ಮಾಡಿಕೊಳ್ಳುತ್ತಿದ್ದಾರೆ.

Advertisement

ಸರಕಾರ ಇಲ್ಲಿಗೆ ಸಾರಿಗೆ ಸೇರಿ ಉಳಿದುಕೊಳ್ಳಲು ಹೋಟೆಲ್‌ಗ‌ಳನ್ನು ನಿರ್ಮಿಸಬೇಕು. ಅನೈತಿಕ ಚಟುವಟಿಕೆ ನಡೆಯದಂತೆ ತಡೆಯಲು ಆನೆಗೊಂದಿ ಭಾಗದಲ್ಲಿ ಪೊಲೀಸ್‌ ಠಾಣೆ ಮಂಜೂರು ಮಾಡಬೇಕು. ಇಲ್ಲಿಯ ಸ್ಥಳಗಳ ವೀಕ್ಷಣೆಗೆ ಪ್ರವಾಸಿಗರಿಗೆ ಮಿನಿ ಬಸ್‌ಗಳಲ್ಲಿ ಟ್ರಕ್ಕಿಂಗ್‌ ಯೋಜನೆ ರೂಪಿಸಬೇಕು. ಸಾಣಾಪೂರ ಲೇಕ್‌(ಕೆರೆ)ಯಲ್ಲಿ ಬೋಟಿಂಗ್‌ ವ್ಯವಸ್ಥೆ ಮಾಡಬೇಕು. ಸ್ಥಳೀಯರು ವ್ಯಾಪಾರ ವಹಿವಾಟು ಮಾಡಲು ಸಾಂಸ್ಕೃತಿ ಪ್ರವಾಸೋದ್ಯಮದ ಯೋಜನೆ ರೂಪಿಸಬೇಕಿ. ಸ್ಥಳೀಯ ಯುವಕರಿಗೆ ಪ್ರವಾಸೋದ್ಯಮ ಇಲಾಖೆ ಸೂಕ್ತ ತರಬೇತಿ ನೀಡಿ ಪ್ರವಾಸಿ ಗೈಡ್‌ಗಳನ್ನಾಗಿ ಮಾಡಬೇಕು. ದೇಶ ವಿದೇಶದ ಪ್ರವಾಸಿಗರಿಗೆ ಎಲ್ಲ ಮೂಲಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next