Advertisement

Udupi ಟೂರಿಸಂ: 58ಕ್ಕೆ ಪ್ರಸ್ತಾವನೆ, 2ಕ್ಕೆ ಅನುಮೋದನೆ

01:48 AM Dec 07, 2024 | Team Udayavani |

ಉಡುಪಿ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರಕಾರಿ ಹಾಗೂ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಸುಮಾರು 58 ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿದ್ದು ಅದರಲ್ಲಿ ಸದ್ಯ 2ಕ್ಕೆ ಮಾತ್ರ ಅನುಮೋದನೆ ಸಿಕ್ಕಿದೆ.

Advertisement

ಕೋಟದಲ್ಲಿ ಡಾ| ಶಿವರಾಮ ಕಾರಂತ ಥೀಮ್‌ ಪಾರ್ಕ್‌ ಅನ್ನು 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಹಾಗೂ ಬೈಂದೂರು ಸೋಮೇಶ್ವರದ ದೇವಸ್ಥಾನದ ಅಭಿವೃದ್ಧಿಗೆ 1.40 ಕೋ.ರೂ. ಯೋಜನೆಗೆ ಮಂಜೂರಾತಿ ದೊರೆತಿದೆ. ಇವೆರೆಡು ಹೊರತುಪಡಿಸಿ ಇಡೀ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕಳುಹಿಸಿರುವ ಯಾವುದೇ ಯೋಜನೆಗೆ ರಾಜ್ಯ ಅಥವಾ ಕೇಂದ್ರ ಸರಕಾರದಿಂದ ಅನುಮೋದನೆ ಸಿಕ್ಕಿಲ್ಲ.

ಉಡುಪಿ 21, ಕಾಪು 13, ಕಾರ್ಕಳ 4, ಬೈಂದೂರು 8 ಹಾಗೂ ಕುಂದಾಪುರ ತಾಲೂಕಿನಲ್ಲಿ 12 ಸೇರಿದಂತೆ ಒಟ್ಟು 58 ಪ್ರದೇಶಗಳ ಅಭಿವೃದ್ಧಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದರಲ್ಲಿ ಸರಕಾರದ ಅನುದಾನದಡಿ ಮಾಡಬಹುದಾದ ಅಭಿವೃದ್ಧಿಗೆ ಸಂಬಂಧಿಸಿದ 50 ಹಾಗೂ ಖಾಸಗಿ-ಸಾರ್ವಜನಿಕ ಸಭಾಗಿತ್ವದಲ್ಲಿ ಮಾಡಬಹುದಾದ ಅಭಿವೃದ್ಧಿಯ 8 ಯೋಜನೆಗಳು ಸೇರಿವೆ.

ಪ್ರಮುಖವಾಗಿ ಯಾವುವು?
ಮಲ್ಪೆ, ಮರವಂತೆ, ಕಾಪು ಸಹಿತ ಜಿಲ್ಲೆಯ ಪ್ರಮುಖ ಬೀಚ್‌ಗಳಲ್ಲಿ ನಡೆಯಬೇಕಿರುವ ಅಭಿವೃದ್ಧಿ ಕಾರ್ಯ ಗಳು, ಜಲಪಾತ ಸಹಿತ ಪ್ರವಾಸಿ ತಾಣ ಗಳಲ್ಲಿ ಅಗತ್ಯ ಮೂಲ ಸೌಕರ್ಯ ಅಭಿವೃದ್ಧಿ, ಪ್ರವಾಸಿ ತಾಣಗಳಿಗೆ ಆಧುನಿಕಸೌಲಭ್ಯ ಒದಗಿಸುವುದು, ವಾಟರ್‌ ಸ್ಪೋರ್ಟ್ ಹೀಗೆ ಎಲ್ಲವೂ ಸೇರಿಕೊಂಡಿದೆ.

58 ಪ್ರಸ್ತಾವನೆಯು ಸುಮಾರು 253 ಕೋ.ರೂ.ಗಳದ್ದಾಗಿದೆ. ಇದರಲ್ಲಿ ಬೈಂದೂರು ತಾಲೂಕಿನ ಒಂದು ಯೋಜನೆಯು ಪಿಪಿಪಿ ಮಾದರಿಯಲ್ಲಿ ಸಿದ್ಧಪಡಿಸಿದ್ದು ಅದು ಸುಮಾರು 100 ಕೋ.ರೂ.ಗಳದ್ದಾಗಿದೆ. ಇದು ಮರವಂತೆ ಬೀಚ್‌ಗೆ ಸಂಬಂಧಿಸಿದ್ದಾಗಿದೆ.

Advertisement

10 ಕೋ.ರೂ. ಮಂಜೂರು
ಕೇಂದ್ರ ಸರಕಾರದ ಸ್ವದೇಶ ದರ್ಶನ 2.0 ಅಡಿಯಲ್ಲಿ ಚಾಲೆಂಜ್‌ ಬೇಸ್ಡ್ ಡೆಸ್ಟಿನೇಶನ್‌ ಡೆವಲಪ್‌ಮೆಂಟ್‌ ಆಧಾರದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹಾಗೂ ಇಕೋ-ಟೂರಿಸಂ ಮತ್ತು ಅಮೃತ್ತ್ ಧರೋಹರ್‌ ಸೈಟ್ಸ್‌ ಅಭಿವೃದ್ಧಿಗೆ 10 ಕೋ.ರೂ. ಮಂಜೂರಾಗಿದ್ದು, ಇನ್ನಷ್ಟೇ ಕಾಮಗಾರಿ ಆರಂಭವಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.

ಸಾಕಷ್ಟು ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದೇವೆ. ಇತ್ತೀಚೆಗೆ ಎರಡು ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಕಾಮಗಾರಿಯನ್ನು ಆರಂಭಿಸಲಿದ್ದೇವೆ. ಸಂಸದರ ಮೂಲಕ ಕೇಂದ್ರ ಸರಕಾರದ ಯೋಜನೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ.
-ಕುಮಾರ್‌ ಸಿ.ಯು.
ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next