Advertisement

ಅಭ್ಯಾಸದ ಬಳಿಕ ಬಿಸಿ ಆಹಾರ ಇಲ್ಲ: ಐಸಿಸಿ ನಿಯಮಕ್ಕೆ ಟೀಮ್‌ ಇಂಡಿಯಾ ಅಸಮಾಧಾನ

11:42 AM Oct 26, 2022 | Team Udayavani |

ಸಿಡ್ನಿ: ಟಿ-20 ವಿಶ್ವಕಪ್‌ ನಲ್ಲಿ ಭಾರತ ಪಾಕ್‌ ಮಣಿಸಿ ಭರ್ಜರಿ ಶುಭಾರಂಭ ಮಾಡಿದೆ. ಮುಂದಿನ ಪಂದ್ಯಕ್ಕಾಗಿ ಅಭ್ಯಾಸವನ್ನು ಮಾಡುತ್ತಿದೆ. ಈ ನಡುವೆ ಆಸ್ಟ್ರೇಲಿಯಾದಲ್ಲಿ ನೀಡುವ ಆಹಾರದ ಬಗ್ಗೆ ಆರೋಪವೊಂದು ಕೇಳಿ ಬಂದಿದೆ.

Advertisement

ಟೀಮ್‌ ಇಂಡಿಯಾ ಮಂಗಳವಾರ ಅಭ್ಯಾಸವನ್ನು ನಡೆಸಿದೆ. ಸತತ ಅಭ್ಯಾಸದ ಬಳಿಕ ಮಧ್ಯಾಹ್ನದ ವೇಳೆ ಊಟದ ಬದಲಿಗೆ ಲಘು ಉಪಹಾರವನ್ನು ನೀಡಿದ್ದಾರೆ. ಸ್ಯಾಂಡ್‌ ವಿಚ್‌, ಹಣ್ಣುಗಳನ್ನು ಒಳಗೊಂಡಿರುವ ಉಪಹಾರವನ್ನು ಸೇವಿಸಬೇಕು. ಎಲ್ಲಾ ತಂಡಗಳಿಗೂ ಇದೇ ಆಹಾರವನ್ನು ನೀಡಲಾಗುತ್ತದೆ. ಆದರೆ ಬಿಸಿಯಿಲ್ಲದ ಸ್ಯಾಂಡ್‌ ವಿಚ್‌ ನ್ನು ನೀಡುತ್ತಾರೆ ಎನ್ನುವುದು ಟೀಮ್‌ ಇಂಡಿಯಾದ ವಾದ.

ಮಂಗಳವಾರದ ಐಚ್ಛಿಕ ತರಬೇತಿಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ ಜೊತೆಗೆ ಎಲ್ಲಾ ವೇಗದ ಬೌಲರ್‌ಗಳಿಗೆ ವಿಶ್ರಾಂತಿ ನೀಡಲಾಗಿತ್ತು.

ಬಿಸಿಸಿಐ ಪ್ರಕಾರ, ಅಭ್ಯಾಸದ ವೇಳೆ ಮಧ್ಯಾಹ್ನವಾಗುತ್ತದೆ. ಈ ಸಮಯದಲ್ಲಿ ಆಟಗಾರರಿಗೆ ಬಿಸಿಯಾದ ಊಟ ಬೇಕು. ಆಟಗಾರರು ಊಟ ಮಾಡಲು ಇಚ್ಛಿಸುತ್ತಾರೆ. ಆ ಸಮಯದಲ್ಲಿ ಅವರಿಗೆ ಬಿಸಿಯಾದ ಆಹಾರ ಬೇಕು.

ನಾವು ಬಹಿಷ್ಕಾರ ಮಾಡುತ್ತಿಲ್ಲ. ಕೆಲ ಆಟಗಾರರು ಹಣ್ಣುಗಳನ್ನು ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬರು ಊಟ ಮಾಡಲು ಬಯಸಿದ್ದರು. ಆ ಕಾರಣಕ್ಕಾಗಿ ಕೆಲವರು ಹೊಟೇಲ್‌ ಗೆ ಹೋಗಿ ಊಟ ಮಾಡಿದರು ಎಂದು ಬಿಸಿಸಿಐ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

Advertisement

ಐಸಿಸಿ ಊಟದ ಬಳಿಕ ಬಿಸಿಯಾದ ಆಹಾರವನ್ನು ನೀಡದಿರುವುದು ಸಮಸ್ಯೆಯಾಗಿದೆ. ಈ ಹಿಂದೆ ದ್ವಿಪಕ್ಷೀಯ ಸರಣಿಯಲ್ಲಿ ಅತಿಥೇಯರು ಅಭ್ಯಾಸದ ಬಳಿಕ ಭಾರತೀಯ ಆಹಾರವನ್ನು ಬಿಸಿಯಾಗಿ ನೀಡುತ್ತಿದ್ದರು. ಆದರೆ ಈಗಿನ ನಿಯಮ ಎಲ್ಲಾ ತಂಡಗಳಿಗೂ ಒಂದೇ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಬಿಸಿಸಿಐ ಮುಂದಿನ ಅಭ್ಯಾಸಗಳಿಗೆ ಆಹಾರದ ವಿಷಯದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next