Advertisement

ಡ್ರೀಮ್‌ 11 ವಿರುದ್ಧ ಸದ್ಯ ಬಲವಂತದ ಕ್ರಮ ಬೇಡ: ಹೈಕೋರ್ಟ್‌ ಸೂಚನೆ

12:10 PM Oct 29, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌, ಗೇಮಿಂಗ್‌ ಹಾಗೂ ಗ್ಯಾಂಬ್ಲಿಂಗ್‌ ನಿಷೇಧಿಸಿ ಇತ್ತಿಚಿಗೆ ಜಾರಿಗೆ ತರಲಾಗಿರುವ ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯ್ದೆಯ ನಿಯಮಗಳ ಪ್ರಕಾರ “ಡ್ರೀಮ್‌ 11′ ಗೇಮ್‌ ಆ್ಯಪ್‌ ನಡೆಸುತ್ತಿರುವ ಸ್ಪೋರ್ಟ್ಸ್ ಟೆಕ್ನಾಲಜೀಸ್‌ ಲಿಮಿಟೆಡ್‌ನ‌ ಸಂಸ್ಥಾಪಕರಾದ ಭವಿತ್‌ ಶೇಠ್ ಹಾಗೂ ಹರ್ಷ ಜೈನ್‌ ವಿರುದ್ಧ ಸದ್ಯ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಹೈಕೋರ್ಟ್‌ ಸೂಚಿಸಿದೆ.‌

Advertisement

ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್‌ ರದ್ದುಪಡಿಸುವಂತೆ ಕೋರಿ ಭವಿತ್‌ ಶೇಠ್ ಹಾಗೂ ಹರ್ಷ ಜೈನ್‌ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ದ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಪೊಲೀಸ್‌ ಹಾಗೂ ಸರ್ಕಾರಕ್ಕೆ ನಿರ್ದೇಶನ ನೀಡಿದೆ ವಿಚಾರಣೆಯನ್ನು ನ.9ಕ್ಕೆ ಮುಂದೂಡಿತು.

ಪ್ರಕರಣವೇನು?: ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌, ಗೇಮಿಂಗ್‌ ಹಾಗೂ ಗ್ಯಾಂಬ್ಲಿಂಗ್‌ ನಿಷೇಧಿಸಿ ಇತ್ತೀಚೆಗೆ ಜಾರಿಗೆ ತರಲಾದ ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯ್ದೆಯ ಸೆಕ್ಷನ್‌ 79 ಹಾಗೂ 80 ರ ಅಡಿ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಡ್ರೀಮ್‌ 11 ಆ್ಯಪ್‌ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ.

ಇದನ್ನೂ ಓದಿ:- ಕೊನೆ ಕ್ಷಣದಲ್ಲಿ ಕದನ ಕಲಿಗಳ ಕಸರತ್ತು

ನಾಗರಭಾವಿ ನಿವಾಸಿ ಮಂಜುನಾಥ್‌ ಎಂಬುವರು ನೀಡಿದ ದೂರಿನ ಮೇರೆಗೆ ಅ. 7ರಂದು ಆ್ಯಪ್‌ ಸಂಸ್ಥಾ ಪಕ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ. ಈ ಎಫ್ಐಆರ್‌ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ನ್ಪೋರ್ಟ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥಾಪಕರು, ದೂರುದಾರರು ತಮ್ಮ ವಿರುದ್ಧ ಯಾವುದೇ ಆಧಾರವಿಲ್ಲದೆ ಆರೋಪ ದಾಖಲಿಸಿದ್ದಾರೆ.

Advertisement

‘ಡ್ರೀಮ್‌ 11’ ಗೇಮ್‌ ಆಫ್ ಸ್ಕಿಲ್‌ ಆಗಿ ದೆಯೇ ಹೊರತು ಜೂಜು ಅಲ್ಲ. ಹಾಗಿದ್ದೂ ದೂರು ದಾರರು ಗೇಮ್‌ ಆಫ್ ಚಾನ್ಸ್‌ ರೀತಿಯ ಜೂಜು ಎಂದು ಭಾವಿಸಿ ದೂರು ದಾಖಲಿಸಿದ್ದಾರೆ.. ಡ್ರೀಮ್‌ 11 ಆನ್‌ ಲೈನ್‌ ಗೇಮ್‌ ಮೂಲಕ ಜನ ಹಣ ಕಳೆದು ಕೊಳ್ಳಲಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ವಾಸ್ತವಕ್ಕೆ ದೂರವಾಗಿದ್ದು, ತಮ್ಮ ವಿರುದ್ಧ ದಾಖಲಿಸಿ ರುವ ಎಫ್ಐಆರ್‌ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next