Advertisement

Exclusive: ದೇವಾಲಯ ಒಡೆದು ಜ್ಞಾನವಾಪಿ ಮಸೀದಿ ಕಟ್ಟಿಲ್ಲ…ಆದರೆ: ASI ವರದಿಯಲ್ಲೇನಿದೆ?

06:10 PM Jan 27, 2024 | Team Udayavani |

ಕಾಶಿ ವಿಶ್ವನಾಥ ಮಂದಿರ ಸಮೀಪದ ಜ್ಞಾನವಾಪಿ ಮಸೀದಿ ವಿವಾದ ಮುಂದುವರಿದ ನಡುವೆಯೇ ಕೋರ್ಟ್‌ ಆದೇಶದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್‌ ಐ) ಇಲಾಖೆ ಸಮೀಕ್ಷೆ ನಡೆಸಿದ್ದು, ಇದೀಗ ಆ ವರದಿ ಬಹಿರಂಗಗೊಂಡಿದೆ. ಈ ಹಿಂದೆ ಇದ್ದ ದೇವಾಲಯವನ್ನು ಧ್ವಂಸಗೊಳಿಸಿ, ಮಸೀದಿಯನ್ನು ಕಟ್ಟಲಾಗಿದೆ ಎಂದು ಹಿಂದೂ ಪರ ಅರ್ಜಿದಾರರು ವಾದಿಸಿದ್ದರು. ಆದರೆ ವರದಿಯಲ್ಲಿ ಕುತೂಹಲಕಾರಿ ಅಂಶಗಳಿರುವುದು ಪತ್ತೆಯಾಗಿದೆ.

Advertisement

ಇದನ್ನೂ ಓದಿ:Ratnagiri- Watch Video: ಪೊಲೀಸ್‌ ಠಾಣೆಯೊಳಗೆ ನುಗ್ಗಿ ಶ್ವಾನವನ್ನು ಹೊತ್ತೊಯ್ದ ಚಿರತೆ!

ಪುರಾತನ ಹಿಂದೂ ದೇವಾಲಯವನ್ನು ಕೆಡವಿ, ಆ ಸ್ಥಳದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ಎಎಸ್‌ ಐ ವರದಿ ಹೇಳಿದೆ. ಸುಮಾರು 839 ಪುಟಗಳ ವರದಿಯಲ್ಲಿ ಸಮೀಕ್ಷೆಯ ಅಂಶಗಳನ್ನು ದಾಖಲಿಸಿದ್ದು, ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ, ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಿಲ್ಲ. ಆದರೆ ಹಿಂದೆ ಇದ್ದ ಪುರಾತನ ದೇವಾಲಯವನ್ನೇ ಮಾರ್ಪಡಿಸಿ ಮಸೀದಿಯನ್ನಾಗಿ ಪರಿವರ್ತಿಸಲಾಗಿದೆ ಎಂದು ಡಿಎನ್‌ ಎ ವರದಿ ವಿವರಿಸಿದೆ.

ಪುರಾತನ ಹಿಂದೂ ದೇವಾಲಯವನ್ನು ಧ್ವಂಸಗೊಳಿಸದೇ, ಜ್ಞಾನವಾಪಿ ಮಸೀದಯನ್ನಾಗಿ ಪರಿವರ್ತಿಸಲಾಗಿದೆ ಎಂಬುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಜ್ಞಾನವಾಪಿ ಮಸೀದಿಯಲ್ಲ, ಹಿಂದೂ ದೇವಾಲಯವಾಗಿತ್ತು ಎಂಬುದಕ್ಕೆ ಹಲವಾರು ಸಾಕ್ಷ್ಯಗಳು ಸಿಕ್ಕಿವೆ.

Advertisement

ಗಮನಾರ್ಹ ಅಂಶವೆಂದರೆ ಹಿಂದೂ ದೇವತೆಗಳ ಭಗ್ನಗೊಂಡ ಶಿಲ್ಪಗಳು ಮಸೀದಿಯ ಪಶ್ಚಿಮ ಆವರಣದೊಳಗೆ ಕಂಡುಬಂದಿದೆ. ಇವು ಎಸ್‌ 2 ನೆಲಮಹಡಿಯಲ್ಲಿ ಪತ್ತೆಯಾಗಿದೆ. ಅಂದರೆ ಹಿಂದೂ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸುವ ಸಮಯದಲ್ಲಿ ಹಿಂದೂ ಶಿಲ್ಪಗಳನ್ನು ಮುಚ್ಚಿ ಹಾಕಲಾಗಿತ್ತು. ಪಶ್ಚಿಮ ಚೇಂಬರ್‌ ನಲ್ಲಿ ಮುಚ್ಚಿಟ್ಟ ಹಿಂದೂ ದೇವತೆಗಳ ಶಿಲ್ಪಗಳು ಭಗ್ನಗೊಂಡಿವೆ. ಇದರ ಹಿಂದೆ ಎರಡು ಪ್ರಮುಖ ಕಾರಣಗಳಿವೆ. ಒಂದನೇಯದಾಗಿ ಮೂರ್ತಿ ಪೂಜೆ ಇಸ್ಲಾಂನಲ್ಲಿ ನಿಷೇಧ. ಎರಡನೇಯದು ಇದು ಹಿಂದೂ ದೇವಾಲಯವಲ್ಲ ಮಸೀದಿ ಎಂಬುದಾಗಿ ತೋರಿಸಲು ಸಾಕ್ಷ್ಯವನ್ನು ನಾಶಪಡಿಸಲು ಯತ್ನಿಸಿರುವುದು ಸ್ಪಷ್ಟವಾಗಿದೆ. ಸುಮಾರು ಮೂರು ಶತಮಾನಗಳ ಕಾಲ ಈ ಪ್ರಯತ್ನ ಮಾಡಲಾಗಿತ್ತು ಎಂದು ವರದಿಯಲ್ಲಿ ಬಹಿರಂಗಗೊಂಡಿದೆ.

ಸಮೀಕ್ಷೆಯ ಸಮಯದಲ್ಲಿ ಭಗ್ನಗೊಂಡ ಶಾಸನ ಪತ್ತೆಯಾಗಿದೆ. ಈ ಶಾಸನದ ಚಿತ್ರವನ್ನು 1965-66ರಲ್ಲಿ ಎಎಸ್‌ ಐ ದಾಖಲು ಮಾಡಿಕೊಂಡಿತ್ತು. ಭಗ್ನಗೊಂಡ ಪರ್ಷಿಯನ್‌ ಭಾಷೆಯ ಶಾಸನದ ಬಗ್ಗೆ ಎಎಸ್‌ ಐ ವರದಿಯಲ್ಲಿ ವಿವರಿಸಿದೆ. 1676-77ರ ಅವಧಿಯಲ್ಲಿ ಹಜರತ್‌ ಅಲಂಗೀರ್‌ ಅಂದರೆ ಮೊಘಲ್‌ ಚಕ್ರವರ್ತಿ ಔರಂಗಜೇಬ್‌ ಎಂಬಾತ ಮಸೀದಿಯನ್ನು ನಿರ್ಮಿಸಿದನೆಂದು ಉಲ್ಲೇಖಿಸಲಾಗಿದೆ. ಅಲ್ಲದೇ 1792-93ರಲ್ಲಿ ಮಸೀದಿಯನ್ನು ನವೀಕರಿಸಲಾಗಿತ್ತು ಎಂದು ಶಾಸನದಲ್ಲಿ ವಿವರಿಸಲಾಗಿದೆ.

ಗಮನಿಸಬೇಕಾದ ಅಂಶವೇನೆಂದರೆ ಎಎಸ್‌ ಐ ಇತ್ತೀಚೆಗೆ ತೆಗೆದ ಮತ್ತು 1965ರಲ್ಲಿ ತೆಗೆದ ಚಿತ್ರಗಳ ನಡುವೆ ವ್ಯತ್ಯಾಸವಿದೆ. ಸ್ಲ್ಯಾಬ್‌ ನಲ್ಲಿ ಪರ್ಷಿಯನ್‌ ಭಾಷೆಯಲ್ಲಿ ಬರೆಯಲಾದ ಆರು ಸಾಲುಗಳಿವೆ. 1965ರಲ್ಲಿ ತೆಗೆದ ಫೋಟೊದಲ್ಲಿ ಆರು ಸಾಲುಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಇತ್ತೀಚೆಗೆ ಎಎಸ್‌ ಐ ತೆಗೆದ ಫೋಟೊದಲ್ಲಿ ಎರಡು ಸಾಲುಗಳನ್ನು ಅಳಿಸುವ ಪ್ರಯತ್ನ ಮಾಡಲಾಗಿರುವುದು ಕಂಡು ಬಂದಿದೆ. ಶಾಸನದಲ್ಲಿನ ಕೊನೆಯ ಎರಡು ಸಾಲುಗಳನ್ನು ಉದ್ದೇಶಪೂರ್ವಕವಾಗಿ ಅಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಎಎಸ್‌ ಐ ವರದಿಯಲ್ಲಿ ಉಲ್ಲೇಖಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next