Advertisement

Application: ಪೂಜಾ ಕಾಯ್ದೆ ವಿರುದ್ಧದ ಅರ್ಜಿ ಪ್ರಶ್ನಿಸಿ ಜ್ಞಾನವಾಪಿ ಮಸೀದಿ ಸುಪ್ರೀಂ ಮೊರೆ

03:58 AM Dec 07, 2024 | Team Udayavani |

ಹೊಸದಿಲ್ಲಿ: 1991ರ ಪೂಜಾ ಕಾಯ್ದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಿರೋ ಧಿಸಿ ಜ್ಞಾನವಾಪಿ ಮಸೀದಿ ನಿರ್ವಹಣ ಸಮಿತಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಕೋಮುವಾದಿ ಹಕ್ಕು ಸಾಧನೆಯ ಇಂತಹ ಅರ್ಜಿ ಕೋರ್ಟ್‌ ಆಧರಿಸಬಾರದು ಎಂದೂ ಮನವಿ ಮಾಡಲಾಗಿದೆ.

Advertisement

ಇತ್ತೀಚಿನ ವರ್ಷ ಗಳಲ್ಲಿ ಮಸೀದಿ, ದರ್ಗಾಗಳ ಮೇಲಿನ ಹಕ್ಕು ಸ್ವಾಮ್ಯದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆಯೂ ಪಟ್ಟಿ ನೀಡಿದ್ದು ಇದರಲ್ಲಿ ಕರ್ನಾಟಕದ ಬಾಬಾಬುಡನ್‌ಗಿರಿ ದರ್ಗಾ ಮತ್ತು ಹೊಸಕೋಟೆ ಹೆಸರು ಪ್ರಸ್ತಾವಿಸಿದೆ. ಪೂಜಾ ಕಾಯ್ದೆ ಸಂಬಂಧ 2021ರಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಬಗ್ಗೆ ಕೇಂದ್ರ ಇನ್ನೂ ಪ್ರತಿಕ್ರಿಯೆ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next