Advertisement

“ಡಿಕೆಶಿ ಜೊತೆ ಹಣಕಾಸು ವ್ಯವಹಾರವಿಲ್ಲ’

10:56 PM Sep 18, 2019 | Team Udayavani |

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಡಿ ವಶದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಜೊತೆಗೆ ಹಣಕಾಸಿನ ವ್ಯವಹಾರ ನಡೆಸಿಲ್ಲ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟನೆ ನೀಡಿದ್ದಾರೆ.

Advertisement

ಡಿ.ಕೆ.ಶಿವಕುಮಾರ್‌ ಅಕ್ರಮ ವ್ಯವಹಾರ ಪ್ರಕರಣಗಳ ಕುರಿತು ಜಾರಿ ನಿರ್ದೇಶನಾಲ ಯದ ಅಧಿಕಾರಿಗಳು ಗುರುವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿರುವುದಕ್ಕೆ ಪಕ್ಷದ ಕಚೇರಿ ಯಲ್ಲಿ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್‌, ಸೆ.14ರಂದೇ ವಿಚಾರಣೆಗೆ ಹಾಜರಾಗು ವಂತೆ ಇಡಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು.

ಆದರೆ, ನನಗೆ ಆ ಸಂದರ್ಭದಲ್ಲಿ ಹಾಜರಾಗಲು ಆಗುವುದಿಲ್ಲ ಎಂದು ಬೇರೆ ದಿನ ಅವಕಾಶ ನೀಡುವಂತೆ ಕೋರಿದ್ದೆ. ಅದರಂತೆ ಗುರುವಾರ ಹಾಜರಾಗಲು ನೋಟಿಸ್‌ ನೀಡಿದ್ದಾರೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ್‌ ಬಂಧನಕ್ಕೆ ಸಂಬಂಧಿಸಿ ದಂತೆ 184 ಜನರನ್ನು ವಿಚಾರಣೆಗೆ ಕರೆದಿದ್ದಾರೆ. ಅದರಂತೆ ನನ್ನನ್ನೂ ಕರೆದಿದ್ದಾರೆ. ಯಾವ ಕಾರಣಕ್ಕಾಗಿ ನನ್ನ ಕರೆದಿದ್ದಾರೆ ಎಂಬ ಮಾಹಿತಿಯಿಲ್ಲ.

ಅವರೊಂದಿಗೆ ನಾನು ಹಣಕಾಸು ವ್ಯವಹಾರ ನಡೆಸಿಲ್ಲ. ನನ್ನ ಮನೆಯ ಮೇಲೆ ಐಟಿ ದಾಳಿಯಾಗಿದ್ದರೂ, ಆ ಪ್ರಕರಣಗಳು ಇಡಿಗೆ ವರ್ಗಾವಣೆಯಾಗಿಲ್ಲ ಎಂದು ಹೇಳಿದರು. ಬೆಂಗಳೂರು ಅಥವಾ ಬೆಳಗಾವಿಯಲ್ಲಿ ವಿಚಾರಣೆ ನಡೆಸುವಂತೆ ಕೋರಿ ಕೊಂಡಿದ್ದೆ. ಆದರೆ, ಈ ಬಗ್ಗೆ ಇಡಿ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ದೆಹಲಿಗೆ ತೆರಳಿ ವಿಚಾರಣೆ ಎದುರಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next