Advertisement

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

09:47 PM Dec 23, 2024 | Team Udayavani |

ಚಿಕ್ಕಮಗಳೂರು: ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ. ತಲೆ ಮುಂಭಾಗದಲ್ಲಿ ಭಾರೀ ಪ್ರಮಾಣದ ತೂತು ಬಿದ್ದಿದೆ. ಎರಡು ದಿನ ಬ್ಯಾಂಡೇಜ್‌, ಆಮೇಲೆ ಆಯಿಟ್‌ಮೆಂಟ್‌ ಹಾಕಬೇಕು. ಕೂದಲಿನ ಮೇಲೆ ಬ್ಯಾಂಡೇಜ್‌ ಸ್ಟಿಕ್ಕರ್‌ ನಿಲ್ಲಲ್ಲ. ಹಾಗಾಗಿ ಬ್ಯಾಂಡೇಜ್‌ ಹಾಕಿದ್ದಾರೆ. ಗಾಯ ಆಗಿಲ್ಲ ಅಂದ್ರೆ ಎಷ್ಟು ದಿನ ನಾಟಕ ಮಾಡಲು ಆಗುತ್ತೆ ಎಂದು ಸಿ.ಟಿ.ರವಿ ಪತ್ನಿ ಪಲ್ಲವಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ತಿರುಗೇಟು ನೀಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ಸಿ.ಟಿ.ರವಿ ಒಳ್ಳೇ ಡ್ರಾಮಾ ಮಾಸ್ಟರ್‌ ಎನ್ನುವ ಹೆಬ್ಬಾಳ್ಕರ್‌ ಅವರು ಮ್ಯಾನ್‌ ಹ್ಯಾಂಡ್ಲಿಂಗ್‌ ಮಾಡಿಸಿ ಸುತ್ತಾಡಿಸಿದ್ದರಿಂದ ಜ್ವರ ಬಂದಿದೆ. ದಿನಾ ನಾಟಕ ಮಾಡೋರು ಅದೇ ರೀತಿ ಇರ್ತಾರೆ, ಹೇಳುವರಿಗೇನು ಏನು ಬೇಕಾದರೂ ಹೇಳ್ತಾರೆ. ಲಕ್ಷ್ಮೀಯವರು ಸಿ.ಟಿ.ರವಿಗೆ ಅಕ್ಕ, ತಂಗಿ, ಅಮ್ಮ ಹೆಂಡ್ತಿ ಇಲ್ವಾ ಎಂದಿದ್ದಾರೆ. ಅವರಿಗೆ ಎಲ್ಲರೂ ಇದ್ದಾರೆ. ಅಮ್ಮ ಇಲ್ಲದಿದ್ರೆ ಭೂಮಿಗೆ ಬರೋದಾದ್ರು ಹೇಗೆ, ಸಿ.ಟಿ.ರವಿಗೆ ಅವರದ್ದೇ ಆದ ಸಂಸ್ಕಾರ ಇದೆ. ಅವರಿಗೆ (ಲಕ್ಷ್ಮೀ  ಹೆಬ್ಬಾಳ್ಕರ್‌ ) ಹಾಗೇ ಹೇಳುವುದು ರೂಢಿಯಾಗಿದೆ ಎನಿಸುತ್ತದೆ. ಒರಟುತನದ ಮಾತು ಅವರಿಗೆ ಅಭ್ಯಾಸ ಆಗಿದೆ ಎಂದರು.

ಸದನದ ಒಳಗೆ ನಡೆದಿರುವುದನ್ನು ಲಕ್ಷ್ಮೀ ಹೆಬ್ಬಾಳ್ಕರ್‌ ನಮ್ಮವರೆಗೂ ಏಕೆ ತಂದರು ಅರ್ಥವಾಗುತ್ತಿಲ್ಲ. ಸಿ.ಟಿ.ರವಿಗೆ ಅವರದ್ದೇ ಆದ ಸಂಸ್ಕಾರ ಇದೆ. ರಾಜಕಾರಣಿ ಹೇಗಿರಬೇಕು ಎನ್ನುವುದನ್ನು ಅವರಿಂದ ನಾನು ಕಲಿತ್ತಿದ್ದೇನೆ. ತುಂಬಾ ಜನಕ್ಕೆ ನಾನೇ ಹೇಳ್ತೀನಿ, ಸಿ.ಟಿ.ರವಿ ಜತೆ ಇದ್ರೆ ಊಟ, ತಿಂಡಿ ಸಿಗಲ್ಲ, ಬಿ.ಪಿ., ಶುಗರ್‌ ಇರುವವವರು ಅವರ ಜತೆ ಹೋಗಬೇಡಿ ಅಂತಾ ನಾನೇ ಹೇಳ್ತಿನಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next