Advertisement
ಈ ಕುರಿತು ವಿಡಿಯೋ ಹೇಳಿಕೆ ನೀಡಿರುವ ಅವರು, ಶ್ರೀರಾಮಮಂದಿರ ಲೋಕಾರ್ಪಣೆ ವಿಷಯದಲ್ಲಿ ಯಾರಿಗೂ ಅಸಮಾಧಾನವಿಲ್ಲ. ಯಾರಾದರೂ ಅಸಮಾಧಾನಗೊಂಡಿದ್ದರೆ ಅದು ಅವರ ವೈಯಕ್ತಿಕ ವಿಷಯ. ಶ್ರೀರಾಮ ಮತ್ತು ಶಂಕರ ಪರಂಪರೆಗೂ ಏನು ಸಂಬಂಧ ಎಂಬುದನ್ನು ತಿಳಿದುಕೊಳ್ಳಬೇಕು. ಶಂಕರ ಪರಂಪರೆಯ ಮೂಲ ಪುರುಷರಾದ ಆದಿಶಂಕರರು ತಮ್ಮ ಅದ್ವೈತ ಸಿದ್ಧಾಂತದ ಮೂಲಕ ಪರಮಾತ್ಮನನ್ನು ತತ್ವ ಸ್ವರೂಪ ದಲ್ಲಿ ಆರಾಧಿಸುವ ಪದ್ಧತಿಯನ್ನು ಜಗತ್ತಿಗೆ ಕೊಟ್ಟಿದ್ದಾರೆ. ಹರಿ-ಹರ ಇಬ್ಬರೂ ಸಮಾನವಾದ ರೂಪಗಳು. ಈ ಇಬ್ಬರನ್ನೂ ಸಮಾನವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸುವ ಏಕೈಕ ಪರಂಪರೆ ಎಂದರೆ ಶಂಕರ ಪರಂಪರೆ. ಅಯೋಧ್ಯೆ ಶ್ರೀರಾಮ ಎಂದರೆ ಭಾರತೀಯ ಸಂಸ್ಕೃತಿಗೆ ಸೇರಿದ ದೇವರು. ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ. ಅಲ್ಲಿ ಪುರಾತನ ದೇವಾಲಯ ಇತ್ತು. ಆಕ್ರಮಣದಿಂದ ಅದು ನಾಶವಾಗಿತ್ತು. 500 ವರ್ಷ ಞಗಳ ತ್ಯಾಗ, ಸಮ ರ್ಪಣಾ ಮನೋಭಾವದಿಂದ ಅದೇ ಸ್ಥಳದಲ್ಲಿ ಶ್ರೀರಾಮಚಂದ್ರ ನೆಲೆಸುತ್ತಿದ್ದಾನೆ. ಇದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ರಾಮಮಂದಿರ ಲೋಕಾ ರ್ಪಣೆಗೊಳ್ಳುವ ದಿನ ಎಲ್ಲಾ ಮಠಗಳಲ್ಲೂ ಶ್ರೀ ರಾಮಚಂದ್ರನ ಆರಾಧನೆ ಮಾಡಲು ಸಂಕಲ್ಪ ಮಾಡಿದ್ದೇವೆ. ಸನಾತನ ಧರ್ಮದ ಎಲ್ಲರೂ ಸೇರಿ ಒಟ್ಟಾಗಿ ಪೂಜಿಸಬೇಕು. ಇದರಲ್ಲಿ ಜಾತಿ ಮತ್ತು ಪಕ್ಷವನ್ನು ತರಬಾರದು ಎಂದು ಹೇಳಿದ್ದಾರೆ. Advertisement
Ayodhya Ram Mandir ಲೋಕಾರ್ಪಣೆಯಲ್ಲಿ ಭಿನ್ನಾಭಿಪ್ರಾಯವಿಲ್ಲ: ಹರಿಹರಪುರ ಶ್ರೀ
12:39 PM Jan 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.