Advertisement
ಮೀನಿನಲ್ಲಿ ರಾಸಾಯನಿಕ ಪದಾರ್ಥಗಳನ್ನು ಸೇರಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇದನ್ನು ಪತ್ತೆಹಚ್ಚುವ ಕಾರಣದಿಂದ ರಾಸಾಯನಿಕ ಪದಾರ್ಥ ಪತ್ತೆ ಹಚ್ಚುವ ಕಿಟ್ ಅನ್ನು ಕೇರಳದ ಕೊಚ್ಚಿನ್‌ನಲ್ಲಿರುವ ಕೇಂದ್ರ ಮೀನುಗಾರಿಕೆ ತಂತ್ರಜ್ಞಾನಸಂಸ್ಥೆಯಿಂದ ಗುರುವಾರ ಮೀನುಗಾರಿಕೆ ಇಲಾಖೆಯು ತರಿಸಿತ್ತು. ಶುಕ್ರವಾರ ಕಿಟ್ ಮೂಲಕ ಅಧಿಕಾರಿಗಳು ಮಂಗಳೂರಿನ ಬಂದರಿನ ಮೀನು ಮಾರಾಟ ಮಾಡುವ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.ರಾಸಾಯನಿಕ ಅಂಶ ಪತ್ತೆಯಾಗಿಲ್ಲದ ಹಿನ್ನೆಲೆಯಲ್ಲಿ, ಪರಿಶೀಲನೆ ನಡೆಸಿದ ಬಳಿಕ ಕಿಟ್ ಅನ್ನು ಆಹಾರ ಸುರಕ್ಷತಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಆಹಾರ ಸುರಕ್ಷತಾಇಲಾಖೆಯಲ್ಲಿ ಈ ಕಿಟ್ ಇರಲಿದೆ.
ಕೇಂದ್ರ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆಯಿಂದ ತರಿಸಲಾದ ಕೊಚ್ಚಿನ್ ಕಿಟ್ ಅನ್ನು ಉಡುಪಿ ಹಾಗೂ ಕಾರವಾ
ರಕ್ಕೂ ಪ್ರತ್ಯೇಕವಾಗಿ ತರಿಸಲಾಗಿದೆ. ಸದ್ಯ ಮಂಗಳೂರಿನಲ್ಲಿ ಇಟ್ಟಿರುವ ಕಿಟ್ ಅನ್ನು ಶನಿವಾರ ಉಡುಪಿ ಹಾಗೂ ಕಾರವಾರಕ್ಕೆ ತಲುಪಿಸಲಾಗುತ್ತದೆ.