Advertisement

ಕೇರಳದ ಅಗಸ್ತ್ಯಮಲೆ: ಮಹಿಳೆಯರಿಗೆ ನಿಷೇಧವಿಲ್ಲ: ಸಚಿವ ರಾಜು

03:13 PM Jan 13, 2017 | udayavani editorial |

ತಿರುವನಂತಪುರ : ಇಲ್ಲಿಂದ ಎಪ್ಪತ್ತು ಕಿ.ಮೀ. ದೂರದಲ್ಲಿರುವ ಕೇರಳದ ಅತ್ಯಂತ ಎತ್ತರದ ಶಿಖರ ತಾಣವಾಗಿರುವ ಅಗಸ್ತ್ಯಮಲೆ ಅಥವಾ ಅಗಸ್ತ್ಯಕೂಟಂ ತಾಣಕ್ಕೆ ಹೋಗುವುದಕ್ಕೆ ಮಹಿಳೆಯರಿಗೆ ಯಾವುದೇ ನಿಷೇಧವಿಲ್ಲ ಎಂದು ಕೇರಳ ಅರಣ್ಯ ಸಚಿವ ಕೆ ರಾಜು ಸ್ಪಷ್ಟಪಡಿಸಿದ್ದಾರೆ.

Advertisement

ಅಗಸ್ತ್ಯಮಲೆ ಅತ್ಯಂತ ಎತ್ತರದ ಹಾಗೂ ದುರ್ಗಮ ತಾಣವಾಗಿದ್ದು ಅಲ್ಲಿಗೆ ಹೋಗುವುದು ಮಹಿಳೆಯರಿಗೆ ಕಷ್ಟ ಸಾಧ್ಯ. ಈ ತಾಣವನ್ನು ತಲುಪಲು ಮಹಿಳೆಯರು ಭಾರೀ ನೈಸರ್ಗಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ; ಹಾಗಾಗಿ ಮಹಿಳೆಯರಿಗೆ ಅದು ಸಲ್ಲದ ತಾಣವೆಂದು ತಿಳಿಯಲಾಗಿದೆಯೇ ವಿನಾ ಮಹಿಳೆಯರು ಅಲ್ಲಿಗೆ ಹೋಗುವುದಕ್ಕೆ ಯಾವುದೇ ನಿಷೇಧವಿಲ್ಲ ಎಂದು ಸಚಿವ ರಾಜು ಹೇಳಿದರು. 

ಅಗಸ್ತ್ಯ ಮಲೆ ತಾಣವು ಪೆಪ್ಪಾರ ಅರಣ್ಯ ವಲಯದಲ್ಲಿದ್ದು ಅಲ್ಲಿಗೆ ಹೋಗಲು ಎರಡು ರಾತ್ರಿಗಳು ಮತ್ತು ಮೂರು ದಿನಗಳು ಬೇಕಾಗುತ್ತವೆ. ಜನರು ಅತ್ಯಂತ ಕಡಿದಾದ ದುರ್ಗಮ ಮಾರ್ಗದ ಮೂಲಕ ಅಲ್ಲಿಗೆ ಹೋಗಬೇಕಾಗುತ್ತದೆ; ವನ್ಯಮೃಗಗಳು ಆಗೀಗ ಎದುರಾಗುತ್ತಲೇ ಇರುತ್ತವೆ ಎಂದು ರಾಜು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next