Advertisement

Swecha: ಟ್ರೇಲರ್‌ ನಲ್ಲಿ ‘ಸ್ವೇಚ್ಛಾ’ ನವತಂಡದ ಪ್ರಯತ್ನ

06:23 PM Dec 30, 2024 | Team Udayavani |

ಸ್ವೇಚ್ಛಾ- ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಹಾಗೂ ಹಾಡು ಬಿಡುಗಡೆಯಾಯಿತು. ಸುರೇಶ್‌ ರಾಜು ಈ ಚಿತ್ರದ ನಿರ್ದೇಶಕರು. ಸ್ಟಾರ್‌ ಮಸ್ತಾನ್‌ ಹಾಗೂ ಕೆ.ಆರ್‌. ಮುರಹರಿ ರೆಡ್ಡಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.  ಅನ್ವಿಶ್‌ ಹಾಗೂ ಪವಿತ್ರಾ ನಾಯಕ್‌ ಚಿತ್ರದ ನಾಯಕ, ನಾಯಕಿಯಾಗಿ ಕಾಣಿಸಿಕೊಂಡದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸುರೇಶ್‌ ರಾಜು, ಸ್ವೇಚ್ಛಾ ನವರಸಗಳನ್ನೂ ಒಳಗೊಂಡ ಪ್ರೇಮಕಥೆಯಾಗಿದ್ದು, 90ರ ದಶಕದ ಹಾಗೂ ಈಗಿನ ಕಾಲಘಟ್ಟದ ಕಥೆಗಳನ್ನು ಪ್ಯಾರಲಲ್‌ ಆಗಿ ಹೇಳುತ್ತಾ ಸಾಗುತ್ತದೆ ಎಂದು ಚಿತ್ರದ ಬಗ್ಗೆ ವಿವರ ನೀಡಿದರು.

ಚಿತ್ರದ 5 ಹಾಡುಗಳಿಗೆ ಲೋಕಿ ತವಸ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನ್ವಿಶ್‌ ಮತ್ತು ಪವಿತ್ರ ನಾಯಕ್‌ ಚಿತ್ರದ ಪ್ರೇಮಕಥೆಯ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ.

ಕೆ.ಆರ್‌. ಮುರಹರಿ ರೆಡ್ಡಿ ಅವರಿಲ್ಲಿ ನಾಯಕಿಯ ತಂದೆಯಾಗಿ ನಟಿಸಿದ್ದಾರೆ. ಇನ್ನೊಂದು ಕಥೆಯಲ್ಲಿ ನಟಿ ಸ್ಪಂದನ ಮತ್ತು ಶ್ರೀಲಕ್ಷ್ಮೀ ತಾಯಿ, ಮಗಳಾಗಿ ಭಾವನಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಾಯಕ ಅನ್ವಿಶ್‌, ತಮ್ಮ ಪಾತ್ರದ ಕುರಿತಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next