Advertisement

ಎನ್‌ಎಂಎಂಎಸ್‌ ಪರೀಕ್ಷೆ : ಕುಂದಾಪುರ-ಬೈಂದೂರು: 32 ಮಂದಿ ವಿದ್ಯಾರ್ಥಿಗಳು ಗೈರು

02:19 PM Feb 28, 2022 | Team Udayavani |

ಕುಂದಾಪುರ : ಎನ್‌ಎಂ ಎಂಎಸ್‌ ಪರೀಕ್ಷೆಯು ರವಿವಾರ ಯಾವುದೇ ಗೊಂದಲವಿಲ್ಲದೆ ಮುಕ್ತಾಯ ಗೊಂಡಿದ್ದು, ಕುಂದಾಪುರ ಹಾಗೂ ಬೈಂದೂರು ವಲಯದಲ್ಲಿ 1,371 ಮಂದಿ ವಿದ್ಯಾರ್ಥಿಗಳ ಪೈಕಿ 32 ಮಂದಿ ಗೈರಾಗಿದ್ದಾರೆ.

Advertisement

ಕುಂದಾಪುರ ವಲಯದ ವಿದ್ಯಾರ್ಥಿಗಳು ಇಲ್ಲಿನ ಬೋರ್ಡ್‌ ಹೈಸ್ಕೂಲಿನಲ್ಲಿ ಪರೀಕ್ಷೆ ಬರೆದಿದ್ದು, ಪರೀಕ್ಷೆಗೆ ನೊಂದಾಯಿಸಿದ್ದ 694 ವಿದ್ಯಾರ್ಥಿಗಳ ಪೈಕಿ 679 ಮಂದಿ ಹಾಜರಾಗಿದ್ದಾರೆ. 17 ಮಂದಿ ಗೈರಾಗಿದ್ದಾರೆ.

ಬೈಂದೂರು ವಲಯದ ವಿದ್ಯಾರ್ಥಿಗಳು ಸಾಂದೀಪನ್‌ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ ನಾಗೂರಿನಲ್ಲಿ ಪರೀಕ್ಷೆ ಬರೆದಿದ್ದು, ಪರೀಕ್ಷೆಗೆ ನೊಂದಾಯಿಸಿದ 677 ವಿದ್ಯಾರ್ಥಿಗಳ ಪೈಕಿ 662 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ. 15 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇನ್ನು ಬೈಂದೂರು ವಲಯದ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next