Advertisement

NIRF ರ್‍ಯಾಂಕಿಂಗ್‌ : ಬೆಂಗಳೂರು IISಗೆ ಹ್ಯಾಟ್ರಿಕ್‌ ಗರಿಮೆ

06:05 AM Apr 04, 2018 | Team Udayavani |

ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೊಂದಾದ ಬೆಂಗಳೂರಿನ ಭಾರತೀಯ ವಿದ್ಯಾಸಂಸ್ಥೆಯು, ಕೇಂದ್ರ ಸರ್ಕಾರ ನೀಡುವ ಶ್ರೇಷ್ಠ ವಿಶ್ವವಿದ್ಯಾಲಯಗಳ (2018) ಶ್ರೇಯಾಂಕ ಪಟ್ಟಿಯಲ್ಲಿ (NIRF ರ್‍ಯಾಂಕಿಂಗ್‌) ಸತತ ಮೊದಲ ಸ್ಥಾನ ಗಳಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದೆ. 2016 ಹಾಗೂ 2017ರಲ್ಲಿಯೂ ಈ ಸಂಸ್ಥೆ ಮೊದಲ ಸ್ಥಾನ ಪಡೆದಿತ್ತು. ಇದಲ್ಲದೆ, ಬೆಂಗಳೂರಿನ ಐಐಎಂ, ಶ್ರೇಷ್ಠ ಮ್ಯಾನೇಜ್‌ಮೆಂಟ್‌ ವಿದ್ಯಾಸಂಸ್ಥೆಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಇನ್ನು ಇದೇ ಮೊದಲ ಬಾರಿಗೆ ದೇಶದ ಕಾನೂನು ವಿದ್ಯಾಸಂಸ್ಥೆಗಳಿಗೆ ರ್‍ಯಾಂಕಿಂಗ್‌ ನೀಡಲಾಗಿದ್ದು, ಇದರಲ್ಲಿ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ಯೂನಿರ್ವರ್ಸಿಟಿಗೆ (NLSIಯು) ಮೊದಲ ಸ್ಥಾನ ಸಿಕ್ಕಿದೆ. ಇದಷ್ಟೇ ಅಲ್ಲ, ಮಣಿಪಾಲದ ಕಸ್ತೂರ್‌ಬಾ ವೈದ್ಯಕೀಯ ಕಾಲೇಜು, ದೇಶದ 4ನೇ ಶ್ರೇಷ್ಠ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

Advertisement

ಕಾನೂನು ಕಾಲೇಜು ಪಟ್ಟಿ
– ಎನ್‌ಎಲ್‌ಎಸ್‌ಐಯು, ಕರ್ನಾಟಕ
– ಎನ್‌ಎಲ್‌ಯು, ದೆಹಲಿ
– ಎನ್‌ಯುಎಲ್‌, ತೆಲಂಗಾಣ
– ಐಐಟಿ ಖರಗ್ಪುರ ಪ. ಬಂಗಾಳ
– ಎನ್‌ಎಲ್‌ಯುಜೆ ರಾಜಸ್ಥಾನ

IIM ಪಟ್ಟಿ
– ಐಐಎಂ ಅಹ್ಮದಾಬಾದ್‌
– ಐಐಎಂ ಬೆಂಗಳೂರು
– ಐಐಎಂ ಕಲ್ಕತ್ತಾ
– ಐಐಎಂ ಲಕ್ನೋ
– ಐಐಎಂ ಮುಂಬೈ

ಸ್ಪರ್ಧಿಸದಿದ್ದರೆ ಅನುದಾನ ಕಟ್‌ 
ಮುಂದಿನ ಎನ್‌ಐಆರ್‌ಎಫ್ ರ್‍ಯಾಂಕಿಂಗ್‌ನಲ್ಲಿ ದೇಶದ ಎಲ್ಲಾ ಸರ್ಕಾರಿ ಸಂಸ್ಥೆಗಳೂ  ಕಡ್ಡಾಯವಾಗಿ ಸ್ಪರ್ಧಿಸಲೇಬೇಕು. ತಪ್ಪಿದರೆ, ಅನುದಾನ ಕಡಿತ ಮಾಡುವುದಾಗಿ  ಕೇಂದ್ರ ಮಾನವ ಸಂಪನ್ಮೂಲ ಸಚಿವ ಜಾವಡೇಕರ್‌ ಎಚ್ಚರಿಸಿದ್ದಾರೆ. 

ಮಣಿಪಾಲ್‌ ವಿದ್ಯಾಸಂಸ್ಥೆಗಳ ಸಾಧನೆ
NIRF ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಮಣಿಪಾಲ ವಿದ್ಯಾಸಂಸ್ಥೆಗಳು ಸಾಧನೆ ಮಾಡಿವೆ. ಫಾರ್ಮಸಿ ವಿಭಾಗದಲ್ಲಿ ಮಣಿಪಾಲ್‌ ಕಾಲೇಜ್‌ ಆಫ್ ಫಾರ್ಮಾಸ್ಯುಟಿಕಲ್‌ ಸೈನ್ಸಸ್‌ ಸಂಸ್ಥೆ 7ನೇ ಸ್ಥಾನ ಗಳಿಸಿದ್ದರೆ, ಶ್ರೇಷ್ಠ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ 12ನೇ ಸ್ಥಾನ ಗಳಿಸಿದೆ. ಇನ್ನು, ಶ್ರೇಷ್ಠ ಆರ್ಕಿಟೆಕ್ಚರ್‌ ವಿದ್ಯಾಸಂಸ್ಥೆಗಳ ಪಟ್ಟಿಯಲ್ಲಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ನ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಟರ್‌ ವಿಭಾಗವು 10ನೇ ಸ್ಥಾನ ಪಡೆದಿದೆ. 

Advertisement

ಟಾಪ್‌ 5 ವಿಶ್ವವಿದ್ಯಾಲಯ
– ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಜವಾಹರಲಾಲ್‌ ವಿಶ್ವವಿದ್ಯಾಲಯ ಬನಾರಸ್‌ ಹಿಂದೂ ವಿಶ್ವವಿದ್ಯಾಲಯ
– ಅಣ್ಣಾ ವಿಶ್ವವಿದ್ಯಾಲಯ
– ಹೈದರಾಬಾದ್‌ ವಿವಿ

ದೆಹಲಿಯ ಜೆಎನ್‌ಯು ಈ ಬಾರಿ ಶ್ರೇಷ್ಠ ವಿವಿಗಳ ಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿದೆ. ಈ ಸ್ಥಾನ ಸಿಕ್ಕಿರುವುದು ಅಫ್ಜಲ್‌ ಗುರು ಪರವಾದ ಘೋಷಣೆಗಳಿಂದಲ್ಲ, ವಿದ್ಯಾರ್ಥಿಗಳ ಉತ್ತಮ ಸಂಶೋಧನೆಗಳಿಂದ. 
– ಪ್ರಕಾಶ್‌ ಜಾವಡೇಕರ್‌, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next