Advertisement
ಜಾತಕದಲ್ಲಿ ಲಗ್ನ (ಆತ್ಮಭಾವ)ದ ಮನೆಗೆ, ಲಗ್ನಾಧಿಪತಿಗೆ, ರೋಗದ (6ನೇಯ ಹಾಗೂ 8ನೇ ಮನೆ) ಅಧಿಪತಿಗಳಿಗೆ, ಮನೆಗಳಿಗೆ ದೋಷವಿದ್ದರೆ, ಹನ್ನೆರಡನೇ ಮನೆಯ ದೋಷವು ಆರೋಗ್ಯದ ಸಂಬಂಧವಾಗಿ ಬಸವಳಿಸುವ ಲಕ್ಷಣಗಳನ್ನು ಪಡೆದಿದ್ದರೆ, ಮನುಷ್ಯನ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತವೆ. ಭಾಗ್ಯ, ಸುಖ, ಪೂರ್ವ ಪುಣ್ಯ ವಿಚಾರಗಳು ಜಾತಕದಲ್ಲಿ ಗಟ್ಟಿಯಾಗಿದ್ದರೆ ಈ ದೋಷಗಳನ್ನು ಸರಿಪಡಿಸಬಹುದು.
Related Articles
Advertisement
ಶುಕ್ರನ ದೋಷಗಳು ಲೈಂಗಿಕ ವೈಪರಿತ್ಯಗಳನ್ನು, ಅಕ್ರಮ ಸಂಬಂಧಗಳನ್ನು, ಲೈಂಗಿಕತೆಯಿಂದ ಹತಾಶೆ, ಪಶ್ಚಾತಾಪ ಕೋಟಲೆಗಳನ್ನು, ಲೈಂಗಿಕ ಅತೃಪ್ತಿಗಳನ್ನು ಯೋಜಿಸಬಹುದು. ಬಾಳ ಸಂಗಾತಿಯ ಅಸ್ವಾಸ್ಥ್ಯತೆ ಯಿಂದ ಜೀವನದ ಸಮತೋಲನ ತಪ್ಪಬಹುದು. ಸಾಂಸಾರಿಕವಾದ ನೆಲೆಯಲ್ಲಿನ ಸಮಾಧಾನದ ಬೇರುಗಳು ಬುಡಮೇಲಾಗಬಹುದು. ಸದಾ ಅವ್ಯಕ್ತವಾದ ಭಯವು ಸಂತೃಪ್ತಿಯ ಆವರಣಗಳನ್ನೇ ಕತ್ತರಿಸಿ ಹಿಂಸಿಸಬಹುದು. ಸ್ತ್ರೀ ಶಾಪದಿಂದಾಗಿ ಓರ್ವನ ದೈನಂದಿಕ ಸುಭದ್ರತೆಯೊಂದು ಅವನತಿಯ ದಾರಿಯನ್ನು ತಲುಪಬಲ್ಲದು.
ಬುಧನು ತಾಪಕಾರಿಯಾಗಿದ್ದಲ್ಲಿ ಅಯೋಮಯ ವಾದ ಅಲರ್ಜಿ, ಶ್ವಾಸಕೋಶ ಸಂಬಂಧೀ ಕಾಯಿಲೆ, ಚರ್ಮವ್ಯಾಧಿಗಳು ಉಲ್ಪಣಿಸಬಲ್ಲವು.ಕರುಳು ಹುಣ್ಣು, ಅಸಿಡಿಟಿ, ಹುಳಿ ತೇಗು, ವಾಯು ಪ್ರಕೋಪ, ಹಸಿವೆಯೇ ಆಗದಿರುವ ವಿಕ್ಷಿಪ್ತ ಸ್ಥಿತಿ, ಯಕೃತ್ತಿನ ಹುಣ್ಣು, ಕಲ್ಲು, ರಕ್ತ ಶುದ್ಧತೆಯಲ್ಲಿ ಕೊರತೆ ಬಾಧಿಸಬಲ್ಲವು ಕುಷ್ಟ , ತೊನ್ನು, ತುರಿಗಜ್ಜಿಗಳು ಬಾಧಿಸಬಲ್ಲವು. ಮಲ ಬದ್ಧತೆ, ಅತಿಸಾರ, ಹೊಟ್ಟೆ ನೋವು ಇತ್ಯಾದಿ ಬುಧನಿಂದಾಗುವ ಕುಯಕ್ತಿಗಳಾಗಿವೆ. ಸೂರ್ಯನಿಂದ ತೀವ್ರವಾದ ಉಷ್ಣ ಬಾಧೆ, ಟೈಫಾಯ್ಡ, ಮಿದುಳು ಜ್ವರ, ರಕ್ತದ ಶುದ್ಧತೆಯ, ಸಲೀಸಾದ ಕೆಲಸಕಾರ್ಯಗಳಿಗೆ ಧಕ್ಕೆ ಉಂಟಾಗಬಹುದು.
ಕ್ಷಯ ರೋಗ ಕೂಡ ಸೂರ್ಯನೇ ನೀಡುವ ಬಾಧೆ. ರಾಜ ವಿರೋಧಿ ಚಟುವಟಿಕೆಗಳಿಗೆ, ಸಂವಿಧಾನ ಬಾಹಿರ ಚಟುವಟಿಕೆಗಳಿಗೆ ಪ್ರೇರೇಪಣೆ ನೀಡಿ, ಮಾನಸಿಕ ಸ್ವಾಸ್ಥ್ಯವನ್ನ ತುಂಡರಿಸಿ, ಜೈಲು, ಗಲ್ಲು ಇತ್ಯಾದಿ ಸಂಕಷ್ಟಗಳಿಗೆ ಸೂರ್ಯ ದಾರಿ ಮಾಡಬಹುದಾಗಿದೆ. ಜೀವ ದ್ರವ ಕುಸಿತ, ದೇಹಕ್ಕೆ ಬೇಕಾದ ಜಲ, ಲವಣ,ಉಪಯುಕ್ತ ಖನಿಜಗಳ ಕೊರತೆಗೆ ಸೂರ್ಯ ಅವಕಾಶ ಮಾಡಿಕೊಡಬಲ್ಲ. ಲೈಂಗಿಕ ವ್ಯಾಧಿ, ಮಾನಸಿಕ ಅಸ್ವಾಸ್ಥ್ಯ, ಗೀಳು, ಭಯ, ಸ್ಥೈರ್ಯದಿಂದ ಇರಲು ಸಾಧ್ಯವಾಗದ ದುರ್ಬಲ ಮನಸ್ಸು, ಸ್ತ್ರೀಯರಿಗೆ ಪುರುಷರಿಗೆ, ಪುರುಷರಿಂದ ಮಹಿಳೆಯರಿಗೆ ವಿಪತ್ತು ತಂದಿಡಬಲ್ಲ ದುಷ್ಟತನ ಚಂದ್ರನ ಕೈಚಳಗಳಾಗಿವೆ. ಲಿವರ್ ಮೇಲೆ ಬಹುದೊಡ್ಡ ಆಘಾತವನ್ನು, ಆತಂಕಗಳನ್ನು ಚಂದ್ರ ನಿರ್ಮಿಸಬಲ್ಲ ಕಫ, ವಾತಗಳು ಚಂದ್ರನಿಂದಲೇ ಉಲ್ಪಣಗೊಳ್ಳುತ್ತವೆ. ಅಪಘಾತ, ರಕ್ತಪಾತ, ಶಸ್ತ್ರಚಿಕಿತ್ಸೆ, ರಕ್ತದೊತ್ತಡ, ಮಿದುಳು ಸ್ರಾವ, ವ್ರಣ, ಮಾಗದ ಗಾಯ, ಸಕ್ಕರೆ ಕಾಯಿಲೆ, ಅಪರಾಧಗಳನ್ನು ಎಸಗುವ ಪಾಪದ ಮನಸ್ಸು, ಯೋಜನೆಗಳನ್ನೆಲ್ಲ ಒದಗಿಸಿ ಅಂಗಾರಕ (ಕುಜ) ಜೀವನವನ್ನ ನರಳಿಸಬಲ್ಲ. ಗುರು ಗ್ರಹವು ಕಾರಣವಿರದೆ ಜನ ವಿರೋಧ, ಸೂಕ್ಷ್ಮ ಮತಿಗಳ ಅಸಹಕಾರಗಳನ್ನು ನಿರ್ಮಿಸಿ ಮನುಶ್ಯನನ್ನು ಏಕಾಂಗಿ ಯಾಗಿಸಬಲ್ಲದು. ಏಕಾಂಗಿತನ ಇನ್ನಿರದ ವೈಪರಿತ್ಯಗಳಿಗೆ ವೇದಿಕೆಯನ್ನೊದಗಿಸಿ ನರಳಿಸಬಹುದು. ಒಟ್ಟಿನಲ್ಲಿ ಗ್ರಹಗಳು ನಮ್ಮ ಜೀವನದಲ್ಲಿ ಸ್ವಾಸ್ಥ್ಯದಿಂದ, ಅಸ್ವಾಸ್ಥ್ಯಕ್ಕೆ ಸುಖದಿಂದ ನಿತ್ಯ ನರಕದ ಕೂಪಕ್ಕೆ, ಅಮೃತತ್ವದಿಂದ ವಿನಾಶಕ್ಕೆ ಸರ್‌ನೆ ತಳ್ಳಬಲ್ಲವು.
ಕಾರಣವಿರದೇ ಹೆದರಿಸಿ, ಇಲ್ಲದ ರೋಗಗಳನ್ನೂ ಸೃಷ್ಟಿಸುವ ದುಷ್ಟ ಶಕ್ತಿಗಳ ನಡುವೆ, ವೈದ್ಯರು, ಜ್ಯೋತಿಷಿಗಳ ನಡುವೆ ತಂದು ನಿಲ್ಲಿಸಬಹುದು. ನಿಮ್ಮ ಮನಸ್ಸು ಹಿತಮಿತವಾದ ಸ್ಥೈರ್ಯದಲ್ಲಿ, ಹಿಡಿತದಲ್ಲಿ, ಸಮತೋಲನ ಹೊಂದಿದ ಆತ್ಮ ವಿಶ್ವಾಸದಲ್ಲಿ ಹತೋಟಿಯಲ್ಲಿರಲಿ. ನಂತರ ದೈವೇಚ್ಛೆ.
ಅನಂತಶಾಸ್ತ್ರೀ