Advertisement

ಹೊಟೇಲಿಗರಿಗೆ ಕರ್ಫ್ಯೂ ಆಘಾತ : ಗಾಯಕ್ಕೆ ಬರೆ ಎಳೆದಂತಾಯಿತು ಆದೇಶ

02:39 AM Dec 28, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಜಾರಿಗೊಳಿಸಿರುವ ರಾತ್ರಿ ಕರ್ಫ್ಯೂನಿಂದ ಹೊಟೇಲ್‌ ಉದ್ಯಮ ಆಘಾತಕ್ಕೀಡಾಗಿದ್ದು, ಕೋಟ್ಯಂತರ ರೂ.ನಷ್ಟದ ಆತಂಕ ಎದುರಾಗಿದೆ.

Advertisement

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪಂಚತಾರಾ ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಶೇ.65ರಿಂದ 70ರಷ್ಟು ಬುಕಿಂಗ್‌ ಆಗಿದ್ದವು. ಆದರೆ ನೈಟ್‌ ಕರ್ಫ್ಯೂ ಮಾರ್ಗಸೂಚಿಯಿಂದಾಗಿ ಬುಕಿಂಗ್‌ ರದ್ದು ಮಾಡುತ್ತಿದ್ದಾರೆ. ಕಳೆದ ವರ್ಷವೂ ಹೊಟೇಲ್‌ ಮಾಲಕರು ನಷ್ಟ ಅನುಭವಿಸಿದ್ದರು.

ಬೆಂಗಳೂರು, ಮಂಗಳೂರು, ಮೈಸೂರು, ಹಂಪಿ, ಬಳ್ಳಾರಿ, ಶಿವಮೊಗ್ಗ ಸಹಿತ ರಾಜ್ಯದ ಹಲವು ಕಡೆಗಳಲ್ಲಿ ಪಂಚತಾರಾ ಹೊಟೇಲ್‌ ಹಾಗೂ ರೆಸಾರ್ಟ್‌ಗಳು ಕಾದಿರಿಸಲ್ಪಟ್ಟಿದ್ದವು. ಆದರೆ ಸರಕಾರ ನೈಟ್‌ ಕರ್ಫ್ಯೂ, ಶೇ. 50 ಜನ ಸಾಂದ್ರತೆ ನಿಯಮ ಪ್ರಕಟಿಸುತ್ತಿದ್ದಂತೆ ಗ್ರಾಹಕರು ಬುಕ್ಕಿಂಗ್‌ ರದ್ದುಪಡಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಹೊಟೇಲುಗಳ ಸಂಘದ ಕಾರ್ಯದರ್ಶಿ ಮಧುಕರ್‌ ಶೆಟ್ಟಿ ಹೇಳಿದ್ದಾರೆ.

500 ಕೋಟಿ ರೂ.ನಷ್ಟ
ನೈಟ್‌ ಕರ್ಫ್ಯೂನಿಂದಾಗಿ ಹೊಟೇಲ್‌ ಉದ್ಯಮ ಮತ್ತು ಪ್ರವಾಸಿ ವಲಯಕ್ಕೆ ಸುಮಾರು 500 ಕೋಟಿ ರೂ.ಆದಾಯ ನಷ್ಟವಾಗಲಿದೆ ಎಂದು ಬೆಂಗಳೂರು ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಹೇಳಿದ್ದಾರೆ.

ನೈಟ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಗ್ರಾಹಕರು ಮಾಡಿರುವ ಬುಕಿಂಗ್‌ ರದ್ದು ಮಾಡುತ್ತಿದ್ದಾರೆ. ರಾತ್ರಿ 10ರ ಬದಲು ರಾತ್ರಿ 11 ಗಂಟೆ ಬಳಿಕ ಜಾರಿಗೆ ತರಲಿ.
-ಬಿ.ಚಂದ್ರಶೇಖರ ಹೆಬ್ಟಾರ್‌, ಕರ್ನಾಟಕ ರಾಜ್ಯ ಹೊಟೇಲುಗಳ ಸಂಘದ ಅಧ್ಯಕ್ಷ

Advertisement

ಹೊಸ ವರ್ಷಾಚರಣೆ ವೇಳೆ ಉತ್ತಮ ವ್ಯಾಪಾರದ ನಿರೀಕ್ಷೆ ಯಲ್ಲಿದ್ದೆವು. ಈಗ ನೈಟ್‌ ಕರ್ಫ್ಯೂ, ಶೇ.50 ಮುಂತಾದ ನಿಯಮದಿಂದ ದೊಡ್ಡ ಆರ್ಥಿಕ ಹೊಡೆತ ಬೀಳಲಿದೆ.
– ಪಿ.ಸಿ.ರಾವ್‌, ಬೆಂಗಳೂರು ಹೊಟೇಲ್‌ ಮಾಲಕರ ಸಂಘದ ಅಧ್ಯಕ್ಷ

ಗುರುತಿನ ಕಾರ್ಡ್‌ ಸಾಕು
ದೇಶಾದ್ಯಂತ 15-17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ವೇದಿಕೆ ಸಿದ್ಧವಾಗಿದೆ. ಜ.1ರಿಂದಲೇ ಅರ್ಹ ಮಕ್ಕಳು ಕೊವಿನ್‌ ಆ್ಯಪ್‌ ಅಥವಾ ವೆಬ್‌ ಸೈಟ್‌ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದಕ್ಕೆ ಕಾಲೇಜಿನ ಗುರುತಿನ ಚೀಟಿ ಸಾಕು. ಜ.3ರಿಂದ ಲಸಿಕೆ ಹಾಕಲಾಗುತ್ತದೆ.

ಮಾಸ್ಕ್ ಧರಿಸಿ, ಭೌತಿಕ‌ ಅಂತರ ಕಾಪಾಡಿಕೊಳ್ಳಿ
ಒಮಿಕ್ರಾನ್‌ ನಿಯಂತ್ರಣ ಸಂಬಂಧ ಕೇಂದ್ರದ ಸೂಚನೆಯಂತೆ ರಾಜ್ಯ ಸರಕಾರಗಳು ನೈಟ್‌ ಕರ್ಫ್ಯೂನಂಥ ಕಠಿನ ಕ್ರಮಗಳನ್ನು ಜಾರಿ ಮಾಡಿ ಕೊರೊನಾ ನಿಯಂತ್ರಣಕ್ಕೆ ಮುಂದಾಗಿವೆ. ಆದರೆ, ಇದಕ್ಕಿಂತ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಜನತೆ ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಪಾಲಿಸದಿರುವುದು ಕಂಡು ಬರುತ್ತಿದೆ. ಸರಕಾರಗಳು ಎಂಥದ್ದೇ ಕಠಿನ ಕ್ರಮ ಕೈಗೊಂಡರೂ, ಜನರಿಂದ ಪೂರಕ ಸ್ಪಂದನೆ ಸಿಗದ ಹೊರತು, ಯಶಸ್ವಿಯಾಗಲು ಸಾಧ್ಯವಿಲ್ಲ. ಹೀಗಾಗಿ, ಒಮಿಕ್ರಾನ್‌ ನಿಯಂತ್ರಣದಲ್ಲಿ ಸರಕಾರ ಮೊದಲಿಗೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಬೇಕು. ಒಂದು ವೇಳೆ ಪಾಲಿಸದಿದ್ದರೆ, ಕಠಿನ ಕ್ರಮಗಳ ಮೊರೆ ಹೋಗಬಹುದು.

ಒಂದೇ ದಿನ 156 ಒಮಿಕ್ರಾನ್‌ ಪ್ರಕರಣ
ರವಿವಾರದಿಂದ ಸೋಮವಾರದ ಅವಧಿಯಲ್ಲಿ ದೇಶದಲ್ಲಿ 156 ಹೊಸ ಒಮಿಕ್ರಾನ್‌ ಪ್ರಕರಣಗಳು ದೃಢ ಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 578 ಕ್ಕೇರಿದೆ. ಈ ಪೈಕಿ 151 ಮಂದಿ ಚೇತರಿಸಿ ಕೊಂಡಿದ್ದಾರೆ ಎಂದು ಕೇಂದ್ರ ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next