ಮುಂಬಯಿ : ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಐತಿಹಾಸಿಕ 11,000 ಅಂಕಗಳ ಮಟ್ಟವನ್ನು ದಾಟಿದ ಸಾಧನೆಯನ್ನು ಮಾಡಿತು.
ಇದೇ ರೀತಿಯ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 35,957.99 ಅಂಕಗಳ ಹೊಸ ದಾಖಲೆಯ ಎತ್ತರವನ್ನು ತಲುಪಿದ ಸಾಧನೆ ಮಾಡಿತು.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ಸ್ಥಿತಿ ಕಂಡು ಬಂದಿರುವುದು ಮತ್ತು ಭಾರತೀಯ ಶೇರುಪೇಟೆಗೆ ವಿದೇಶೀ ಬಂಡವಾಳದ ಒಳ ಹರಿವು ಹೆಚ್ಚುತ್ತಿರುವುದು ಸೆನ್ಸೆಕ್ಸ್ ಮತ್ತು ನಿಫ್ಟಿ ದಿನ ನಿತ್ಯ ಎಂಬಂತೆ ಹೊಸ ಹೊಸ ದಾಖಲೆಯ ಎತ್ತರಗಳನ್ನು ಕಾಣುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 56.80 ಅಂಕಗಳ ಜಿಗಿತವನ್ನು ಕಂಡು 11,023.00 ಅಂಕಗಳ ಸಾರ್ವಕಾಲಿಕ ಮಟ್ಟದ ಎತ್ತರವನ್ನು ತಲುಪಿತು.
ಸೆನ್ಸೆಕ್ಸ್ 159.98 ಅಂಕಗಳ ಏರಿಕೆಯನ್ನು ದಾಖಲಿಸಿ ಹೊಸ ದಾಖಲೆಯ 35,957.99 ಅಂಕಗಳ ಎತ್ತರವನ್ನು ತಲುಪಿತು. ಸೆನ್ಸೆಕ್ಸ್ ನಿನ್ನೆ ಕಂಡ ಎತ್ತರ 35,827.70 ಅಂಕಗಳ ಮಟ್ಟವಾಗಿತ್ತು.
ಸೆನ್ಸೆಕ್ಸ್ ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಒಟ್ಟು 1,026.99 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ.