ಮುಂಬಯಿ: ಭಾರೀ ಕುಸಿತ ಕಂಡಿದ್ದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಮಂಗಳವಾರ (ಏಪ್ರಿಲ್ 26) ಜಾಗತಿಕ ಷೇರುಪೇಟೆಯ ಭರ್ಜರಿ ವಹಿವಾಟಿನ ಪರಿಣಾಮ 776 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಪಾಕಿಸ್ತಾನ: ಕರಾಚಿ ಯೂನಿರ್ವಸಿಟಿ ಆವರಣದಲ್ಲಿ ಸ್ಫೋಟ, ನಾಲ್ವರು ಸಾವು, ಹಲವರು ಗಂಭೀರ
ಮುಂಬಯಿ ಷೇರುಪೇಟೆ ಬಿಎಸ್ ಇ ಸೆನ್ಸೆಕ್ಸ್ 776.72 ಅಂಕ ಏರಿಕೆಯಾಗಿದ್ದು, 57,356.63 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ನಿಫ್ಟಿ ಕೂಡಾ 246.85 ಅಂಕ ಜಿಗಿತದೊಂದಿಗೆ 17,200 ಅಂಕಗಳ ಗಡಿ ದಾಟಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯ ಪರಿಣಾಮ ಅದಾನಿ ಪೋರ್ಟ್ಸ್, ಬಜಾಜ್ ಆಟೋ ಲಿಮಿಟೆಡ್, ಲುಪಿನ್ ಲಿಮಿಟೆಡ್, ಪವರ್ ಗ್ರಿಡ್, ಮಹೀಂದ್ರ ಆ್ಯಂಡ್ ಮಹೀಂದ್ರ, ರಿಲಯನ್ಸ್ ಇಂಡಸ್ಟ್ರೀಸ್, ಸಿಪ್ಲಾ ಲಿಮಿಟೆಡ್, ಎಲ್ ಆ್ಯಂಡ್ ಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರ್ತಿ ಏರ್ ಟೆಲ್ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಒಎನ್ ಜಿಸಿ ಲಿಮಿಟೆಡ್, ಆ್ಯಕ್ಸಿಸ್ ಬ್ಯಾಂಕ್, ಏಷಿಯನ್ ಪೇಂಟ್ಸ್ ಲಿಮಿಟೆಡ್, ಮಾರುತಿ ಸುಜುಕಿ ಇಂಡಿಯಾ, ಟಾಟಾ ಕನ್ಸ್ ಲ್ಟೆನ್ಸಿ ಲಿಮಿಟೆಡ್ ಷೇರುಗಳು ನಷ್ಟ ಕಂಡಿದೆ.