ನೇಪಿಯರ್, ನ್ಯೂಜೀಲ್ಯಾಂಡ್ : ಆಸ್ಟ್ರೇಲಿಯದಲ್ಲಿ ತೋರಿರುವ ಸರ್ವಾಂಗೀಣ ಕ್ರಿಕೆಟ್ ಪಾರಮ್ಯವನ್ನು ಇದೀಗ ನ್ಯೂಜೀಲ್ಯಾಂಡ್‌ನಲ್ಲೂ ಭಾರತ ತೋರಿಸಲು ಆರಂಭಿಸಿದ್ದು ಇಂದಿಲ್ಲಿ ಆರಂಭಗೊಂಡ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯವನ್ನು ಭಾರತ ಡಕ್ ವರ್ತ್ ಲೂಯಿಸ್ ಕ್ರಮದ ಅನ್ವಯ ಭರ್ಜರಿಯಾಗಿ 8 ವಿಕೆಟ್‌ಗಳಿಂದ ಗೆದ್ದು ಕೊಂಡಿದೆ.
ಶಿಖರ್ ಧವನ್ ಅವರ ಅಜೇಯ 75 ರನ್, ವಿರಾಟ್ ಕೊಹ್ಲಿ ಅವರ 45 ರನ್‌ಗಳ ಬಲದಲ್ಲಿ ಭಾರತ ಕೇವಲ 34.5 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ 156 ರನ್ ಗಳಿಸುವ ಮೂಲಕ ಭರ್ಜರಿ ವಿಜಯವನ್ನು ದಾಖಲಿಸಿತು.
ಇಲ್ಲಿನ ಮೆಕ್‌ಲೀನ್ ಪಾರ್ಕ್‌ನಲ್ಲಿ ಪ್ರವಾಸಿ ಭಾರತದ ವಿರುದ್ಧ ಇಂದು ನಡೆಯುತ್ತಿರುವ ಐದು ಪಂದ್ಯಗಳ ಸರಣಿ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆತಿಥೇಯ ನ್ಯೂಜೀಲ್ಯಾಂಡ್ ವಿರುದ್ಧದ ತಂಡ 38 ಓವರ್‌ಗಳಲ್ಲಿ, 3.18 ರನ್ ರೇಟ್‌ನಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 157 ರನ್ ಕಲೆಹಾಕಿತ್ತು
ಬಲಿಷ್ಠ ಕಿವೀಸ್ ತಂಡವನ್ನು ಇಂದಿನ ಆಟದಲ್ಲಿ ಕಟ್ಟಿ ಹಾಕಿದ ಕುಲದೀಪ್ ಯಾದವ್ 39 ರನ್ ವೆಚ್ಚಕ್ಕೆ ನಾಲ್ಕು ವಿಕೆಟ್ ಕಿತ್ತರೆ ಮೊಹಮ್ಮದ್ ಶಮಿ ಕೇವಲ 19 ರನ್ ವೆಚ್ಚಕ್ಕೆ 3 ವಿಕೆಟ್ ಕಿತ್ತರು. ಉಳಿದಂತೆ ಯಜುವೇಂದ್ರ ಚಹಾಲ್ 2 ವಿಕೆಟ್ ಮತ್ತು ಕೇದಾರ್ ಜಾಧವ್ 1 ವಿಕೆಟ್ ಪಡೆದಿದ್ದರು.
ಕಿವೀಸ್ ಬ್ಯಾಟಿಂಗ್‌ನಲ್ಲಿ ನಾಯಕ ಕೇನ್ ವಿಲಿಯಮ್ಸ್‌ನ್ ಗರಿಷ್ಠ 64 ರನ್ ಬಾರಿಸಿದರು. ಉಳಿದಂತೆ ಗುಪ್‌ಟಿಲ್ 5 ರನ್, ಕಾಲಿನ್ ಮನ್ರೊ 8, ರಾಸ್ ಟೇಲರ್ 24, ಲ್ಯಾದಂ 11, ಹೆನ್ರಿ ನಿಕೋಲ್ಸ್ 12, ಮಿಚೆಲ್ ಸ್ಯಾಂಟ್‌ನರ್ 14, ಮತ್ತು ಡಫ್ ಬ್ರೇಸ್‌ವೆಲ್ 7 ರನ್ ಪಡೆದರು.