Advertisement
ರವಿವಾರದ ಪಂದ್ಯವನ್ನು 59 ರನ್ನುಗಳಿಂದ ಗೆದ್ದು ಸರಣಿಯನ್ನು ಜೀವಂತವಾಗಿರಿಸಿದ್ದು ಸೋಫಿ ಡಿವೈನ್ ಪಡೆಯ ಭರ್ಜರಿ ಪುನರಾಗಮನಕ್ಕೆ ಸಾಕ್ಷಿ. ಮೊದಲ ಪಂದ್ಯವನ್ನು 59 ರನ್ನುಗ ಳಿಂದ ಗೆದ್ದ ಭಾರತ, ದ್ವಿತೀಯ ಪಂದ್ಯ ದಲ್ಲೂ ಇಂಥದೇ ಸಾಧನೆಯನ್ನು ಪುನ ರಾವರ್ತಿಸೀತು ಎಂಬ ನಿರೀಕ್ಷೆ ಇತ್ತು. ಆದರೆ ನ್ಯೂಜಿಲ್ಯಾಂಡ್‌ನ ಸರ್ವಾಂಗೀಣ ಪ್ರದರ್ಶನದ ಮುಂದೆ ಕೌರ್ ಪಡೆ ನೆಲಕಚ್ಚಿತು.
ಭಾರತದ ಬ್ಯಾಟಿಂಗ್ ವೈಫಲ್ಯ ಎದ್ದು ಕಂಡಿತು. 260 ರನ್ ಚೇಸಿಂಗ್ ವೇಳೆ 183ಕ್ಕೆ ಕುಸಿಯಿತು. ಸ್ಮತಿ ಮಂಧನಾ ಸೇರಿದಂತೆ ಪ್ರಮುಖ ಬ್ಯಾಟರ್‌ಗಳೆಲ್ಲ ಕಿವೀಸ್ ದಾಳಿಗೆ ತತ್ತರಿಸಿದರು. ರಾಧಾ ಯಾದವ್-ಸೈಮಾ ಠಾಕೂರ್ 9ನೇ ವಿಕೆಟಿಗೆ 70 ರನ್ ಪೇರಿಸದೇ ಹೋದಲ್ಲಿ ಭಾರತದ ಸ್ಥಿತಿ ಇನ್ನಷ್ಟು ಶೋಚನೀಯವಾಗುತ್ತಿತ್ತು. ನ್ಯೂಜಿಲ್ಯಾಂಡ್ ನಾಯಕಿ ಸೋಫಿ ಡಿವೈನ್ ಅಮೋಘ ಆಲ್‌ರೌಂಡ್ ಶೋ ಮೂಲಕ ಗೆಲುವಿನ ರೂವಾರಿ ಎನಿಸಿದರು. ಭಾರತದ ಪರ ರಾಧಾ ಯಾದವ್ ಇಂಥದೇ ಪ್ರದರ್ಶನ ನೀಡಿದರು. 4 ವಿಕೆಟ್, 48 ರನ್ ಹಾಗೂ 3 ಕ್ಯಾಚ್ ಪಡೆದದ್ದು ಇವರ ಸಾಧನೆಯಾಗಿತ್ತು. ಆದರೆ ತಂಡವನ್ನು ದಡ ಸೇರಿಸಲು ಮಾತ್ರ ಸಾಧ್ಯವಾಗಲಿಲ್ಲ.
ಭಾರತ ಸರಣಿ ಗೆಲ್ಲಬೇಕಾದರೆ ಅಗ್ರ ಸರದಿಯ ಬ್ಯಾಟರ್ ಕ್ರೀಸ್ ಆಕ್ರಮಿಸಿ ಕೊಂಡು ನಿಲ್ಲುವುದು ಅತ್ಯಗತ್ಯ. ಮಂಧನಾ, ಶಫಾಲಿ, ಯಾಸ್ತಿಕಾ, ಕೌರ್, ಜೆಮಿಮಾ ಜಬರ್ದಸ್ತ್ ಪ್ರದರ್ಶನ ನೀಡಲೇಬೇಕಿದೆ. ಈಗಿನ ಲೆಕ್ಕಾಚಾರ ದಂತೆ ಮೊದಲು ಬ್ಯಾಟಿಂಗ್ ನಡೆಸಿ ಸವಾಲಿನ ಮೊತ್ತವನ್ನು ಪೇರಿಸಿದರೆ ಲಾಭ ಹೆಚ್ಚು.
Related Articles
ಪ್ರಸಾರ: ಸ್ಪೋರ್ಟ್ಸ್ 18
Advertisement