Advertisement
ಬಜಪೆ ಪೇಟೆಯ ಚರಂಡಿಯಲ್ಲಿ ಸ್ಲ್ಯಾಬ್ ಬಿರುಕು ದಿನದಿಂದ ದಿನಕ್ಕೆ ದೊಡ್ಡದಾಗಿ ವಾಹನಗಳ ಚಕ್ರಗಳು ಸಿಲುಕುವ ಕಾರಣ ಅಪಾಯಕ್ಕೆ ಕಾರಣವಾಗುತ್ತಿರುವ ಬಗ್ಗೆ ಸೆ. 14ರಂದು ವರದಿ ಮಾಡಿತ್ತು. ಈ ಪ್ರದೇಶದಲ್ಲಿ ಬಸ್‌ಗಳು ಹಾಗೂ ಇತರ ವಾಹನಗಳು ಹೆಚ್ಚು ಸಂಚಾರಿಸುತ್ತಿವೆ. ಲಘು ವಾಹನಗಳ ಚಕ್ರವೂ ಹಲವು ಬಾರಿ ಸಿಲುಕಿಕೊಂಡಿ ರುವುದು ಕಂಡು ಬಂದಿತ್ತು. ಲೋಕೋಪಯೋಗಿ ಇಲಾಖೆ ಸ್ಲ್ಯಾಬ್ ಬಿರುಕು ಬಿಟ್ಟ ಜಾಗದಲ್ಲಿ ಹೊಸ ಸ್ಲ್ಯಾಬ್ನ್ನು ಹಾಕಿದೆ. ಇದರಿಂದ ವಾಹನ ಸಂಚಾರ ಸುಮಗವಾಗಿದೆ. ಇಲ್ಲದ್ದಿದ್ದಲ್ಲಿ ಬಿರುಕು ಬಿಟ್ಟ ಸ್ಲ್ಯಾಬ್ನ ಬಿಟ್ಟು ಇತ್ತ ಒಂದೇ ಬದಿ ವಾಹನ ಸಂಚಾರ ಮಾಡಬೇಕಾಗಿತ್ತು.
ಬಜಪೆ ಪೇಟೆಯಲ್ಲಿ ಬಸ್ ನಿಲ್ದಾಣದ ಸಮೀಪದ ಚರಂಡಿ ಇರುವ ಪ್ರದೇಶದಲ್ಲಿ ಕಾಮಗಾರಿ ಬಾಕಿ ಇದೆ. ಲೋಕೋಪಯೋಗಿ ಇಲಾಖೆಯು ಬಜಪೆ ಪಟ್ಟಣ ಪಂಚಾಯತ್‌ಗೆ ಅದ್ಯಪಾಡಿ ಬಸ್ ತಂಗುದಾಣ ಹಾಗೂ ಮಂಗಳೂರು ಕಡೆ ಸಾಗುವ ರಸ್ತೆಯ ಬದಿಯ ಬಸ್ ತಂಗುದಾಣವನ್ನು ತೆಗೆದು ಜಾಗವನ್ನು ಸಮತಟ್ಟು ಮಾಡಿ ಕೊಡಬೇಕೆಂದು ಮನವಿ ಮಾಡಿಕೊಂಡಿದೆ. ಇದರಿಂದ ರಸ್ತೆ ವಿಸ್ತರಣೆ ಕಾಮಗಾರಿ ಬಳಿಕ ನಡೆಯುವ ಬಗ್ಗೆ ಮುನ್ಸೂಚನೆ ದೊರೆತಿದೆ. ಬಸ್ ನಿಲ್ದಾಣ ತೆರವಿನ ಅನಂತರವೇ ಈ ಕಾಮಗಾರಿ ಆರಂಭವಾಗಲಿದೆ. ಇದರಿಂದ ರಸ್ತೆ ವಿಸ್ತರಣೆ ಜತೆ ಪಾರ್ಕಿಂಗ್‌ಗೂ ಹೆಚ್ಚು ಜಾಗ ಸಿಗಲಿದೆ.