Advertisement

ಕುಂದಾಪುರ: 28 ವರ್ಷಗಳ ಬಳಿಕ ಡಾಮರು ಕಂಡ ರಸ್ತೆ

02:40 AM Dec 13, 2018 | Team Udayavani |

ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್‌ ಬಳಿ 28 ವರ್ಷಗಳ ಬಳಿಕ ರಸ್ತೆಯೊಂದು ಡಾಮರು ಭಾಗ್ಯ ಕಂಡಿದೆ. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ಸೇರಿದಂತೆ ತಾಲೂಕು ಪಂಚಾಯತ್‌ನ ಇನ್ನೊಂದು ಭಾಗಕ್ಕೆ ಹೋಗಲು ಹಾಗೂ ಕೆಲವು ಮನೆಗಳಿಗೆ ಈ ರಸ್ತೆಯೇ ಅನುಕೂಲ. 1990ರಲ್ಲಿ ಈ ರಸ್ತೆ ಡಾಮರೀಕರಣಗೊಂಡ ಬಳಿಕ ಈವರೆಗೆ ನಾದುರಸ್ತಿ ಹಂತದಲ್ಲಿತ್ತು. ಈಗ ಮತ್ತೆ ಡಾಮರೀಕರಣಗೊಂಡಿದೆ. ಬುಧವಾರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ  ಶೆಟ್ಟಿ ಹಾಗೂ ಎಂಜಿನಿಯರ್‌ ಅವರ ತಂಡ ಕಾಮಗಾರಿಯ ಪರಿಶೀಲನೆ ನಡೆಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next